ಬೆಂಗಳೂರು: ತೆಲಂಗಾಣದ ರುಷೇಂದ್ರ ತಿರುಪತಿ ಮತ್ತು ಎಸ್. ರಕ್ಷಿತಾಶ್ರೀ ಅವರು ಇಲ್ಲಿ ನಡೆದ ಯೋನೆಕ್ಸ್- ಸನ್‌ರೈಸ್ 46ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಮಂಗಳವಾರ ನಡೆದ ಬಾಲಕರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ 13ನೇ ಶ್ರೇಯಾಂಕದ ರುಷೇಂದ್ರ ಅವರು 21-18, 18-21, 21-16 ರಿಂದ 8ನೇ ಶ್ರೇಯಾಂಕದ ಸಮರವೀರ್ (ಚಂಡೀಗಢ) ಅವರನ್ನು ಮಣಿಸಿದರು. ಬಾಲಕಿಯರ ಸಿಂಗಲ್ಸ್‌ನಲ್ಲಿ ಶ್ರೇಯಾಂಕರಹಿತ ರಕ್ಷಿತಾಶ್ರೀ ಅವರು 9-21, 21-13, 21-18 ರಿಂದ ಮೂರನೇ ಶ್ರೇಯಾಂಕದ ಅನ್ಮೋಲ್ ಖರ್ಬ್ (ಹರಿಯಾಣ) ಅವರನ್ನು ಪರಾಭವಗೊಳಿಸಿದರು.

ಬಾಲಕರ ಡಬಲ್ಸ್‌ನ ಫೈನಲ್‌ನಲ್ಲಿ ಕರ್ನಾಟಕದ ನಿಕೋಲಸ್ ನಾಥನ್ ರಾಜ್ ಮತ್ತು ತುಷಾರ್ ಸುವೀರ್ ಜೋಡಿಯು 7-21, 21-11, 21-13ರಿಂದ ದೆಹಲಿಯ ಭವ್ಯ ಛಬ್ರಾ ಮತ್ತು ಪರಮ್ ಚೌಧರಿ ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದಿತು.

ಬಾಲಕಿಯರ ಡಬಲ್ಸ್‌ನ ಫೈನಲ್‌ನಲ್ಲಿ ಪಂಜಾಬ್‌ನ ರಾಧಿಕಾ ಶರ್ಮಾ ಮತ್ತು ತನ್ವಿ ಶರ್ಮಾ ಅವರು 21-15, 14-21, 21-18ರಿಂದ ಉತ್ತರಖಂಡದ ಗಾಯತ್ರಿ ರಾವತ್ ಮತ್ತು ಮಾನಸಾ ರಾವತ್ ಜೋಡಿಯನ್ನು ಮಣಿಸಿ ಚಾಂಪಿಯನ್ ಆದರು.

ಮಿಕ್ಸೆಡ್ ಡಬಲ್ಸ್‌ನ ಪ್ರಶಸ್ತಿ ಸುತ್ತಿನಲ್ಲಿ ತೆಲಂಗಾಣದ ಸಾತ್ವಿಕ್ ರೆಡ್ಡಿ ಕೆ. ಮತ್ತು ವೈಷ್ಣವಿ ಖಡ್ಕೇಕರ್ ಜೋಡಿಯು 14-21, 22-20, 21-18ರಿಂದ ಚಂಡೀಗಢದ ಸಮರವೀರ್ ಮತ್ತು ಪಂಜಾಬ್‌ನ ರಾಧಿಕಾ ಶರ್ಮಾ ಅವರನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.