ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾನಿಯಾ ಮಿರ್ಜಾ ಮಗ ಕ್ರಿಕೆಟಿಗನೋ? ಟೆನಿಸ್‌ಪಟುವೋ?

Last Updated 30 ಅಕ್ಟೋಬರ್ 2018, 18:59 IST
ಅಕ್ಷರ ಗಾತ್ರ

ಬೆಂಗಳೂರು: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಮಂಗಳವಾರ ಬೆಳಿಗ್ಗೆ ಜನಿಸಿರುವ ಗಂಡುಮಗುವು ಮುಂದೆ ಟೆನಿಸ್ ಆಟಗಾರನಾಗುವನೋ ಆಥವಾ ಅಪ್ಪ, ಕ್ರಿಕೆಟಿಗ ಶೋಯಬ್ ಮಲಿಕ್ ಅವರಂತೆ ಕ್ರಿಕೆಟಿಗನಾಗುವನೋ ಎಂಬ ಬಿಸಿ ಬಿಸಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

ಬೆಳಿಗ್ಗೆ ತಾವು ಗಂಡುಮಗುವಿನ ತಂದೆಯಾದ ವಿಷಯವನ್ನು ಶೋಯಬ್ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದೇ ತಡ, ವಿಶ್ವದ ಹಲವು ಕ್ರಿಕೆಟಿಗರು, ಟೆನಿಸ್ ಪಟುಗಳು ಮತ್ತು ಅಭಿಮಾನಿಗಳ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದೆ.

ಅದರಲ್ಲಿ ಕೆಲವು ಅಭಿಮಾನಿಗಳು ಈ ಹುಡುಗ ಮುಂದೆ ತನ್ನ ಅಮ್ಮನಂತೆ ಟೆನಿಸ್ ಆಟಗಾರನೇ ಆಗುತ್ತಾನೆ ಎಂದು ಆಶಿಸಿದ್ದಾರೆ. ಇನ್ನೂ ಕೆಲವರು ಶೋಯಬ್ ಅವರಂತೆ ಕ್ರಿಕೆಟಿಗನಾಗುತ್ತಾನೆ. ಆದರೆ ಬ್ಯಾಟ್ಸ್‌ಮನ್, ಬೌಲರ್ ಅಥವಾ ಆಲ್‌ರೌಂಡರ್ ಆಗುತ್ತಾನಾ ಎಂದು ಕಾದು ನೋಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

‘ನಮಗೆ ಗಂಡು ಮಗು ಜನಿಸಿದೆ. ದೇವರ ದಯೆಯಿಂದ ನನ್ನ ಹುಡುಗಿ (ಸಾನಿಯಾ) ಖುಷಿಯಾಗಿ ಮತ್ತು ಎಂದಿನಂತೆಯೇ ಧೈರ್ಯದಿಂದ ಇದ್ದಾಳೆ. ಶುಭಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾವು ವಿನೀತರಾಗಿದ್ದೇವೆ #ಬೇಬಿಮಿರ್ಜಾಮಲ್ಲಿಕ್ ’ ಎಂದು ಶೋಯಬ್ ಟ್ವಿಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT