ಸೋಮವಾರ, ಸೆಪ್ಟೆಂಬರ್ 20, 2021
24 °C

‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌: ಬ್ಯಾಂಕ್ ಆಫ್ ಬರೋಡಾಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಫೀಜ್ ಗಳಿಸಿದ 29 ಪಾಯಿಂಟ್ಸ್ ನೆರವಿನಿಂದ ಬ್ಯಾಂಕ್ ಆಫ್ ಬರೋಡಾ ತಂಡವು ಪ್ರೊ. ಪರಪ್ಪ ಸ್ಮಾರಕ ಟ್ರೋಫಿ ರಾಜ್ಯ ‘ಎ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 64–30ರಿಂದ ರೈಸಿಂಗ್ ಸ್ಟಾರ್ ಮೈಸೂರು ತಂಡವನ್ನು ಸೋಲಿಸಿತು.

ಮತ್ತೊಂದು ಪಂದ್ಯದಲ್ಲಿ ಮಂಗಳೂರು ಬಿಸಿ ತಂಡವು 63–32ರಿಂದ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ವಿರುದ್ಧ ಗೆಲುವು ಸಾಧಿಸಿತು.

ಎಂ.ಸಿ.ಶ್ರೀನಿವಾಸ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ‘ಬಿ’ ಡಿವಿಷನ್‌ ಲೀಗ್‌ನಲ್ಲಿ ಕೆಎಸ್‌ಪಿ ತಂಡವು 84–52ರಿಂದ ಕನಕ ಕೋಲಾರ ಎದುರು, ಎಂ.ಎನ್‌.ಕೆ.ರಾವ್ ಪಾರ್ಕ್ ಬಿಸಿ 83–54ರಿಂದ ಬಾಶ್ ವಿರುದ್ಧ,  ಪ್ರೊಟೆಕ್‌ ಅಸೋಸಿಯೇಷನ್ ಮೈಸೂರು ತಂಡವು 66–51ರಿಂದ ರೋವರ್ಸ್ ಧಾರವಾಡ ಎದುರು, ಎಂಇಜಿ ತಂಡವು 69–31ರಿಂದ ಕೋರಮಂಗಲ ಎಸ್‌ಸಿ ವಿರುದ್ಧ ಜಯ ಗಳಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು