ಸೋಮವಾರ, ನವೆಂಬರ್ 23, 2020
22 °C
ಅಖಿಲ ಭಾರತ ಓಪನ್‌ ಸ್ನೂಕರ್‌ ಟೂರ್ನಿ: ಶ್ರೀರಾಮ್‌ಗೆ ಸೋಲು

ಅಖಿಲ ಭಾರತ ಓಪನ್‌ ಸ್ನೂಕರ್‌ ಟೂರ್ನಿ: ಮೂರನೇ ಸುತ್ತಿಗೆ ಅಭಿಷೇಕ್‌, ಪ್ರತೀಷ್‌

ಪಿಟಿಐ Updated:

ಅಕ್ಷರ ಗಾತ್ರ : | |

ಸ್ನೂಕರ್– ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನ ಅಭಿಷೇಕ್‌ ಅವರು ತಮ್ಮದೇ ರಾಜ್ಯದ ಶ್ರೀರಾಮ್ ಅವರನ್ನು ಸೋಲಿಸಿ, ಅಖಿಲ ಭಾರತ ಅಜಯ್‌ ರಸ್ತೋಗಿ ಸ್ಮಾರಕ ಓಪನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತು ತಲುಪಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಅಭಿಷೇಕ್ ಅವರಿಗೆ 4–1ರಿಂದ ಜಯ ಒಲಿಯಿತು.

ಪ್ರತೀಶ್‌ ಹಾಗೂ ಹರಿಹರನ್ ರಾಜಮಣಿ (ಇಬ್ಬರೂ ತಮಿಳುನಾಡು) ಕೂಡ ಮೂರನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನ ಪಂದ್ಯಗಳಲ್ಲಿ ತಮಿಳುನಾಡಿನ ಉದಯ್‌ ಕುಮಾರ್ ಅವರು ಸತೀಶ್‌ ಕುಮಾರ್‌ ಎದುರು, ಪುದುಚೇರಿಯ ರಾಜಮೋಹನ್‌ ಅವರು ಸೌಮಿನಿ ಶ್ರೀನಿವಾಸ್‌ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ಲಗ್ಗೆಯಿಟ್ಟರು.

ಕೋವಿಡ್‌–19 ಹಿನ್ನೆಲೆಯಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡ ಬಳಿಕ ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಮೊದಲ ಟೂರ್ನಿ ಇದು. ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಟೂರ್ನಿಯಲ್ಲಿ ಪಾಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು