ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ತೋಮರ್‌ಗೆ ಚಿನ್ನ

Last Updated 22 ಫೆಬ್ರುವರಿ 2023, 16:43 IST
ಅಕ್ಷರ ಗಾತ್ರ

ಕೈರೊ: ಒಲಿಂಪಿಯನ್‌ ಐಶ್ವರ್ಯ ಪ್ರತಾಪ್‌ ಸಿಂಗ್‌ ತೋಮರ್‌, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಪುರುಷರ ವೈಯಕ್ತಿಕ 50 ಮೀ. ರೈಫಲ್‌ ತ್ರಿ ಪೊಸಿಷನ್‌ ವಿಭಾಗದಲ್ಲಿ ಚಿನ್ನ ಗೆದ್ದರು.

22 ವರ್ಷದ ತೋಮರ್‌ ಅವರು ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ 16–6 ರಲ್ಲಿ ಆಸ್ಟ್ರಿಯದ ಅಲೆಕ್ಸಾಂಡರ್‌ ಸ್ಮಿರ್ಲ್‌ ಅವರನ್ನು ಮಣಿಸಿದರು.

ಕಳೆದ ವರ್ಷ ಚಾಂಗ್ವಾನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದ್ದ ಭಾರತದ ಶೂಟರ್‌, ರ‍್ಯಾಂಕಿಂಗ್‌ ಸುತ್ತಿನ ಬಳಿಕ 406.4 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಅಲೆಕ್ಸಾಂಡರ್‌ ಅವರು 407.9 ಪಾಯಿಂಟ್ಸ್‌ ಕಲೆಹಾಕಿದ್ದರು.

ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನಲ್ಲಿ ಅವರು 588 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್‌ ಅಖಿಲ್‌ ಶೊರಾನ್ ಅರ್ಹತಾ ಸುತ್ತಿನಲ್ಲಿ 587 ಪಾಯಿಂಟ್ಸ್‌ಗಳನ್ನು ಕಲೆಹಾಕಿ ಎರಡನೇ ಸ್ಥಾನ ಪಡೆದುಕೊಂಡಿದ್ದರು.

‘ಈ ಹಿಂದೆ ಎರಡು ಸಲ ಇದೇ ರೇಂಜ್‌ನಲ್ಲಿ ನಾನು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದೆ. ಆದ್ದರಿಂದ ಈ ಬಾರಿ ಗೆಲ್ಲಲೇಬೇಕೆಂಬ ಛಲದೊಂದಿಗೆ ಬಂದಿದ್ದೆ’ ಎಂದು ತೋಮರ್‌ ಪ್ರತಿಕ್ರಿಯಿಸಿದ್ದಾರೆ.

ಇದರೊಂದಿಗೆ ನಾಲ್ಕು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳನ್ನು ಪಡೆದ ಭಾರತ ತಂಡ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ರಿದಂಗೆ ನಿರಾಸೆ: ಮಹಿಳೆಯರ 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಭಾರತದ ರಿದಂ ಸಾಂಗ್ವಾನ್‌, ಪದಕದ ಅವಕಾಶವನ್ನು ಅಲ್ಪದರಲ್ಲೇ ಕಳೆದುಕೊಂಡರು.

ರ‍್ಯಾಂಕಿಂಗ್ ರೌಂಡ್‌ನಲ್ಲಿ 589 ಪಾಯಿಂಟ್ಸ್‌ ಕಲೆಹಾಕಿದ ಅವರು ಪದಕದ ಸುತ್ತು ಪ್ರವೇಶಿಸಲು ವಿಫಲರಾದರು. ಹಂಗರಿಯ ವೆರೊನಿಕಾ ಮೇಜರ್‌ ಚಿನ್ನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT