ಮಂಗಳವಾರ, ಜನವರಿ 21, 2020
28 °C

ಬ್ಯಾಡ್ಮಿಂಟನ್‌: ಮೂರನೇ ಸುತ್ತಿಗೆ ಯುವರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಯುವರಾಜ್‌ ಶಿಂಧೆ, ಅಖಿಲ ಭಾರತ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ನಗರದ ಹೊರವಲಯದಲ್ಲಿರುವ ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನ ಅಂಗಳದಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಯುವರಾಜ್‌ 13–15, 15–12, 15–7ರಲ್ಲಿ ಶೌರ್ಯ ಮಹಾಜನ್‌ ಅವರನ್ನು ಸೋಲಿಸಿದರು.

ಇನ್ನೊಂದು ಪಂದ್ಯದಲ್ಲಿ ಸಾಕೇತ್‌ ಎಂ.ದೈತೋಟ 11–15, 15–7, 15–10ರಲ್ಲಿ ಫಿರೋಜ್‌ ಮುಲಾನಿ ವಿರುದ್ಧ ಗೆದ್ದರು.

ಇತರ ಪಂದ್ಯಗಳಲ್ಲಿ ವಿಶೇಷ್‌ ಶರ್ಮಾ 15–6, 15–12ರಲ್ಲಿ ತನಯ್‌ ರವೀಂದ್ರ ಎದುರೂ, ನರೇನ್‌ ಅಯ್ಯರ್‌ 15–9, 15–6ರಲ್ಲಿ ಪ್ರತೀಕ್‌ ಮಹಾಜನ್‌ ಮೇಲೂ, ಎಸ್‌.ಚಿರಂಜೀವಿ ರೆಡ್ಡಿ 15–6, 15–9ರಲ್ಲಿ ಕೆ.ದರ್ಶನ್‌ ವಿರುದ್ಧವೂ ಜಯಿಸಿದರು.

ಮೊದಲ ಸುತ್ತಿನ ಹಣಾಹಣಿಗಳಲ್ಲಿ ಯುವರಾಜ್‌ ಶಿಂಧೆ 15–12, 15–9ರಲ್ಲಿ ಎ.ಅನೀಶ್‌ ಎದುರೂ, ಕುಮಾರ್‌ ನಿತೇಶ್‌ 7–15, 15–11, 15–13ರಲ್ಲಿ ಎಸ್‌. ಅಭಿಷೇಕ್‌ ಸೆಲ್ವನ್‌ ಮೇಲೂ, ವಿಶೇಷ್‌ ಶರ್ಮಾ 10–15, 15–12, 16–14ರಲ್ಲಿ ರಾಹುಲ್‌ ಮುರುಗನ್‌ ವಿರುದ್ಧವೂ, ಪುನೀತ್‌ ವೆಂಕಟೇಶ್‌ 15–13, 15–13ರಲ್ಲಿ ರುಷಭ್‌ ಜೈನ್‌ ಎದುರೂ, ಪಿ.ಆರುಷ್‌ 13–15, 15–13, 16–14ರಲ್ಲಿ ಸಚಿನ್‌ ಕ್ಷತ್ರಿಯ ಮೇಲೂ, ಮೊಹಮ್ಮದ್‌ ಫಿರೋಜ್‌ ಬಿರಿಯಾಲ್‌ 15–10, 16–14ರಲ್ಲಿ ಅನುರಾಗ್‌ ಜಲಾನ್‌ ಎದುರೂ, ಕೆ.ಪೃಥ್ವಿ ರಾಯ್‌ 15–12, 10–15, 15–6ರಲ್ಲಿ ಉಮಾಂಗ್‌ ಕೌಶಿಕ್‌ ವಿರುದ್ಧವೂ, ಶ್ರೀಕರ ರಾಜೇಶ್ 15–7, 15–4ರಲ್ಲಿ ಬಿ.ಕಿಶೋರ್‌ ಎದುರೂ, ಆರ್‌.ಡಿ.ದರ್ಶನ್‌ 15–5, 15–4ರಲ್ಲಿ ಆಕಾಶ್‌ ಉಪಾಧ್ಯಾಯ ಎದುರೂ, ಎನ್‌.ಚಿರಾಗ್‌ ಗೌಡ 15–9, 16–14ರಲ್ಲಿ ಜೀತು ಟಿ.ಜೋಸ್‌ ಮೇಲೂ, ಡಿ.ಶ್ರೇಯಷ್‌ ನೆಯೋಗಿ 17–15, 15–10ರಲ್ಲಿ ಯಶವಂತ್‌ ವೈಲಾಡ ಎದುರೂ, ಸಾಕೇತ್‌ ಎಂ.ದೈತೋಟ 15–8, 15–4ರಲ್ಲಿ ಜಸ್ಪರ್‌ ಗಾಡ್ವಿನ್‌ ವಿರುದ್ಧವೂ, ನರೇನ್‌ ಅಯ್ಯರ್‌ 15–10, 15–6ರಲ್ಲಿ ಎಂ.ತಮಿಳ್‌ ಸೆಲ್ವನ್‌ ಎದುರೂ, ಎಸ್‌.ಯೋಗೇಂದ್ರ ಕುಮಾರ್‌ 15–13, 15–6ರಲ್ಲಿ ಎಂ.ಪಿ.ಹರ್ಷಲ್‌ ಸೋನಿ ಎದುರೂ, ಪಿ.ವಿ.ವಿನಾಯಕ 15–12, 15–7ರಲ್ಲಿ ವಿಕ್ರಾಂತ್‌ ಚಾವಟ್‌ ಮೇಲೂ, ಸಿ.ಸಚಿನ್‌ 15–5, 15–9ರಲ್ಲಿ ಜಿಲ್‌ ಜಾಯ್‌ ಎದುರೂ, ಬಿ.ಆರ್‌.ದೀಕ್ಷಿತ್‌ 15–9, 7–15, 15–13ರಲ್ಲಿ ಮಣಿದೀಪಕ್‌ ಸಾರಿದ್‌ ವಿರುದ್ಧವೂ, ಕಾರ್ತಿಕ್‌ ಕುಮಾರ್‌ 15–12, 7–15, 15–13ರಲ್ಲಿ ರಿತೇಶ್‌ ಕುಮಾರ್‌ ಎದುರೂ, ಎಸ್‌.ಅಶೋಕ್‌ 15–8, 15–12ರಲ್ಲಿ ಆರ್‌.ಕಾರ್ತಿಕೇಯನ್‌ ಮೇಲೂ, ಪಿ.ಶ್ರವಣಕುಮಾರ್‌ 15–4, 15–4ರಲ್ಲಿ ಹರ್ಷ ಪುರೋಹಿತ್‌ ಎದುರೂ, ಡಿ.ಎಸ್‌.ಸನೀತ್‌ 15–7, 15–2ರಲ್ಲಿ ಅಮಲ್‌ ಸಂಜಯ್‌ ಮಾಯಾದೇವಿ ಮೇಲೂ, ಅಭಯ್ ಎಂ.ಪೈ 15–10, 15–8ರಲ್ಲಿ ಸುನಿಲ್‌ ವಾದ್ವಾ ಎದುರೂ, ಎಸ್‌.ಪಿ.ನಿಶ್ಚಿತ್‌ 15–12, 14–16, 15–10ರಲ್ಲಿ ರೋಹಿತ್‌ ಕುಮಾರ್‌ ಬೆಹೆರಾ ಮೇಲೂ, ಬಿ.ಚಿರಾಗ್‌ 15–11, 15–10ರಲ್ಲಿ ಅಮಿತ್‌ ಧಾಬಸ್‌ ವಿರುದ್ಧವೂ, ಸಿ.ಶ್ರೀನಿವಾಸ್‌ 15–9, 15–8ರಲ್ಲಿ ಉದಯ್‌ ಭಾಸ್ಕರ್‌ ಕೂಚಿಪುಡಿ ಎದುರೂ, ರವಿತೇಜ ಸೀಲಮ್‌ 15–4, 15–8ರಲ್ಲಿ ರಜನೀಶ್‌ ತಿವಾರಿ ವಿರುದ್ಧವೂ ಗೆದ್ದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು