ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಗೆ ಕನ್ನಡಿಗ ಅಭಿಷೇಕ್‌

ಅಖಿಲ ಭಾರತ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿ
Last Updated 10 ಜನವರಿ 2020, 15:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅಭಿಷೇಕ್‌ ಯಲಿಗಾರ್‌ ಅವರು ಅಖಿಲ ಭಾರತ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ ಕೇಂದ್ರದಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಷೇಕ್‌ 21–18, 21–18ರಲ್ಲಿ ಆದಿತ್ಯ ಗುಪ್ತಾ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ರಾಜ್ಯದ ಎಸ್‌.ಭಾರ್ಗವ್‌ 9–21, 20–22ರಲ್ಲಿ ಬಾಲರಾಜ್‌ ಕಾಜ್ಲಾ ಎದುರು ಸೋತರು.

ರಾಜ್ಯದ ಮತ್ತೊಬ್ಬ ಆಟಗಾರ ಎಂ.ರಘು 21–16, 14–21, 16–21ರಲ್ಲಿ ಕಾರ್ತಿಕೇಯ ಎದುರು ಮಣಿದರು.

ಇತರ ಪಂದ್ಯಗಳಲ್ಲಿ ಸಿದ್ಧಾರ್ಥ್‌ ಪ್ರತಾಪ್‌ ಸಿಂಗ್‌ 16–21, 21–17, 21–12ರಲ್ಲಿ ಚಿರಾಗ್‌ ಸೇನ್‌ ಎದುರೂ, ಕೌಶಲ್‌ ಧರ್ಮಾಮರ್‌ 21–17, 14–21, 21–19ರಲ್ಲಿ ಸಿರಿಲ್‌ ವರ್ಮಾ ಎದುರೂ, ಅನ್ಸಲ್‌ ಯಾದವ್‌ 7–21, 21–12, 21–18ರಲ್ಲಿ ಕಿರಣ್‌ ಜಾರ್ಜ್‌ ವಿರುದ್ಧವೂ ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತ ಬ್ಯಾಡ್ಮಿಂಟನ್‌ ತಂಡದ ಮುಖ್ಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಅವರ ಪುತ್ರಿ ಗಾಯತ್ರಿ, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ತೆಲಂಗಾಣದ ಗಾಯತ್ರಿ 21–13, 21–17ರಲ್ಲಿ ಅಸ್ಮಿತಾ ಚಾಲಿಹಾ ಎದುರು ಜಯಿಸಿದರು.

ಕರ್ನಾಟಕದ ಕೃತಿ ಭಾರದ್ವಾಜ್‌ ಹದಿನಾರರ ಘಟ್ಟದಲ್ಲಿ ಎಡವಿದರು. ಮಹಾರಾಷ್ಟ್ರದ ಸ್ಮಿತಾ ತೋಸ್ನಿವಾಲ್‌ 21–15, 15–21, 21–11ರಲ್ಲಿ ಕೃತಿ ವಿರುದ್ಧ ಜಯಿಸಿದರು.

ಇತರ ಪಂದ್ಯಗಳಲ್ಲಿ ಆಕರ್ಷಿ ಕಶ್ಯಪ್‌ 21–6, 21–5ರಲ್ಲಿ ಎ.ಜೆ.ನಿರಂಜನಾ ಎದುರೂ, ರಸಿಕಾ ರಾಜೆ 21–15, 21–19ರಲ್ಲಿ ಶ್ರುತಿ ಮುಂಡಾದ ಮೇಲೂ, ಇರಾ ಶರ್ಮಾ 21–18, 21–8ರಲ್ಲಿ ಶಿಖಾ ಗೌತಮ್‌ ವಿರುದ್ಧವೂ, ವೈಷ್ಣವಿ ಭಾಲೆ 21–10, 21–13ರಲ್ಲಿ ಆಶಿ ರಾವತ್‌ ಮೇಲೂ, ಮುಗ್ಧಾ ಅಗ್ರೇಯಾ 21–18, 18–21, 21–11ರಲ್ಲಿ ವೈದೇಹಿ ಚೌಧರಿ ಎದುರೂ, ಪೂರ್ವ ಬಾರ್ವೆ 21–17, 21–7ರಲ್ಲಿ ಮಾಳವಿಕ ಬನ್ಸೋಡ್‌ ವಿರುದ್ಧವೂ ಜಯಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT