ಸೋಮವಾರ, ಆಗಸ್ಟ್ 8, 2022
23 °C

ಬಾಲ್‍ ಬ್ಯಾಡ್ಮಿಂಟನ್: ಆಳ್ವಾಸ್ ತಂಡ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಬಳ್ಳಾರಿ ಜಿಲ್ಲಾ ಬಾಲ್‍ ಬ್ಯಾಡ್ಮಿಂಟನ್ ಸಂಸ್ಥೆ ಈಚೆಗೆ ಆಯೋಜಿಸಿದ್ದ ಪುರುಷರ ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

16 ತಂಡಗಳು ಭಾಗವಹಿಸಿದ್ದ ಟೂರ್ನಿಯ ಲೀಗ್ ಹಾಗೂ ನಾಕೌಟ್ ಹಂತದ ಎಲ್ಲ ಪಂದ್ಯಗಳಲ್ಲಿ ಆಧಿಪತ್ಯ ಸ್ಥಾಪಿಸಿದ್ದ ಆಳ್ವಾಸ್ ತಂಡ ಗೆದ್ದುಕೊಂಡಿತ್ತು. ಸೂಪರ್ ಲೀಗ್ ಹಂತದ ಮೂರು ಪಂದ್ಯಗಳನ್ನು ಕೂಡ ಗೆದ್ದುಕೊಂಡಿತ್ತು. ಮೊದಲ ಹಣಾಹಣಿಯಲ್ಲಿ ಆಂಧ್ರಪ್ರದೇಶದ ಚಿತ್ತೂರು ತಂಡವನ್ನು 35-32, 33-35, 36-34ರಲ್ಲಿ ಮಣಿಸಿದ ತಂಡ ನಂತರ ಬಳ್ಳಾರಿಯ ಶ್ರವಣ ಫೈವ್ಸ್ ಎದುರು 35-17, 35-14ರಲ್ಲಿ ಜಯಭೇರಿ ಮೊಳಗಿಸಿತು.

ಆಂಧ್ರಪ್ರದೇಶದ ನುನಪರ್ತಿ ತಂಡವನ್ನು 35-24, 35-27ರಲ್ಲಿ ಮಣಿಸಿತು. ಈ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಚಿತ್ತೂರು ತಂಡ ರನ್ನರ್ ಅಪ್ ಆದರೆ ಶ್ರವಣ ಫೈವ್ಸ್ ಮೂರನೇ ಸ್ಥಾನ ಗಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು