ಸೋಮವಾರ, ಜೂನ್ 14, 2021
27 °C

ಗಾಲ್ಫ್‌: ಸೆಮಿಯಲ್ಲಿ ಸೋತ ಅಮನ್‌ ಗುಪ್ತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆರೆಗಾನ್, ಅಮೆರಿಕ‌: ವೀರೋಚಿತ ಹೋರಾಟ ನಡೆಸಿದ ಅಮನ್‌ ಗುಪ್ತಾ ಅವರು ಅಮೆರಿಕ ವೃತ್ತಿಪರ ಗಾಲ್ಫ್‌ನ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ.‌ ಭಾನುವಾರ ನಡೆದ ಹಣಾಹಣಿಯಲ್ಲಿ ಅವರು ಟೈಲರ್‌ ಸ್ಟ್ರಫಾಸಿ ಅವರಿಗೆ ಮಣಿದರು.

‘ನಾನು ಅಂದುಕೊಂಡಂತೆ ಆಡಲಾಗಲಿಲ್ಲ. ಆದರೆ ಉತ್ತಮ ಸಾಮರ್ಥ್ಯ ತೋರಿದ್ದೇನೆ ಎಂಬ ಖುಷಿಯಿದೆ. ಈ ಪಂದ್ಯದಿಂದ ಆತ್ಮವಿಶ್ವಾಸವೂ ವೃದ್ಧಿಸಿದೆ‘ ಎಂದು 21 ವರ್ಷದ ಗುಪ್ತಾ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ವಿಶ್ವದ ಎರಡನೇ ಕ್ರಮಾಂಕದ ಆಟಗಾರ ರಿಕಿ ಕ್ಯಾಸ್ಟಿಲ್ಲೊ ಅವರು ಹಿಂದೆ ಸರಿದ ಕಾರಣ ಗುಪ್ತಾ ಟೂರ್ನಿಯಲ್ಲಿ ಆಡುವ ಅವಕಾಶ ಲಭಿಸಿತ್ತು. 

ಎಂಟರ ಘಟ್ಟದ ಪಂದ್ಯದಲ್ಲಿ ಗುಪ್ತಾ ಅವರು 43ನೇ ಕ್ರಮಾಂಕದ ಮೈಕೆಲ್ ತೊರ್ಬೊನ್ಸೆನ್ ಅವರನ್ನು ಸೋಲಿಸಿದ್ದರು.

ಅಮನ್ ಅವರು ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಜೊನಾಥನ್ ಯಾವುನ್ ಮತ್ತು 16ರ ಸುತ್ತಿನ ಪಂದ್ಯದಲ್ಲಿ ಸ್ಯಾಮ್ ಬೆನೆಟ್ ಅವರನ್ನು ಮಣಿಸಿದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ಸ್ಟ್ರಫಾಸಿ ಅವರು ಸ್ಟುವರ್ಟ್‌ ಹೇಗ್‌ಸ್ಟೀಡ್‌ ಅವರನ್ನು ಸೋಲಿಸಿದ್ದರು. ಈ ಗೆಲುವಿನೊಂದಿಗೆ ಸ್ಟ್ರಫಾಸಿ ಅವರು ಮುಂದಿನ ವರ್ಷ ಟೊರಿ ಪೈನ್ಸ್‌ನಲ್ಲಿ ನಡೆಯಲಿರುವ ಅಮೆರಿಕ ಓಪನ್‌ನಲ್ಲಿ ಸ್ಥಾನ ಗಿಟ್ಟಿಸಿದರು.

ಫೈನಲ್‌ ಪಂದ್ಯದಲ್ಲಿ ಸ್ಟ್ರಫಾಸಿ ಅವರಿಗೆ ಚಾರ್ಲ್ಸ್‌ ಆಸ್ಬಾರ್ನ್‌ ಅವರ ಸವಾಲು ಎದುರಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು