ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್ ಒಲಿಂಪಿಯಾಡ್ ಇಂದಿನಿಂದ: ಭಾರತಕ್ಕೆ ಆನಂದ್ ನೇತೃತ್ವ

Last Updated 21 ಆಗಸ್ಟ್ 2020, 6:10 IST
ಅಕ್ಷರ ಗಾತ್ರ

ಚೆನ್ನೈ : ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ನಾಯಕತ್ವದ ಭಾರತ ತಂಡವು ಶುಕ್ರವಾರ ಆರಂಭವಾಗಲಿರುವ ಆನ್‌ಲೈನ್ ಚೆಸ್ ಒಲಿಂಪಿಯಾಡ್‌ನಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಚೀನಾ, ರಷ್ಯಾ ಮತ್ತು ಅಮೆರಿಕ ತಂಡಗಳೂ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸಲಿವೆ.

ಭಾರತ ತಂಡದಲ್ಲಿ ಪಿ. ಹರಿಕೃಷ್ಣ, ವಿದಿತ್ ಎಸ್ ಗುಜರಾತಿ, ಕೊನೇರು ಹಂಪಿ, ಡಿ ಹರಿಕಾ, ಯುವ ಪ್ರತಿಭೆಗಳಾದ ಆರ್. ಪ್ರಜ್ಞಾನಂದ ಮತ್ತು ನಿಹಾಲ್ ಸರಿನ್ ಭಾರತ ತಂಡದಲ್ಲಿದ್ದಾರೆ. ‌

ಈ ಟೂರ್ನಿಯಲ್ಲಿ ಭಾರತವು ಏಳನೇ ಶ್ರೇಯಾಂಕದಲ್ಲಿದೆ. 2419ರ ಸರಾಸರಿ ರೇಟಿಂಗ್ ಹೊಂದಿದೆ.

ಈ ಟೂರ್ನಿಯಲ್ಲಿ ಪ್ರತಿಯೊಂದು ತಂಡದಲ್ಲಿ ಆರು ಆಟಗಾರಿರುತ್ತಾರೆ. ಅದರಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಇರುವುದು ಕಡ್ಡಾಯ. ಇನ್ನೊಬ್ಬರು ಆಟಗಾರ ಅಥವಾ ಆಟಗಾರ್ತಿ 20 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT