ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ: ಭಾರತ ಮಹಿಳೆಯರು ಫೈನಲ್‌ಗೆ ಲಗ್ಗೆ

Last Updated 23 ಜೂನ್ 2022, 13:14 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತ ಮಹಿಳಾ ಆರ್ಚರಿ ತಂಡದವರು ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಸ್ಟೇಜ್‌–3 ಸ್ಪರ್ಧೆಯ ರಿಕರ್ವ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದು, ಪದಕ ಖಚಿತಪಡಿಸಿಕೊಂಡಿದ್ದಾರೆ.

ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ನೀರಸ ಪ್ರದರ್ಶನ ನೀಡಿದ್ದ ಭಾರತ, ಅಗ್ರ 30 ರಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿ 13ನೇ ಶ್ರೇಯಾಂಕ ಪಡೆದುಕೊಂಡಿತ್ತು.

ಆದರೆ ಗುರುವಾರ ನಡೆದ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜೀತ್‌ ಕೌರ್‌ ಅವರನ್ನೊಳಗೊಂಡ ತಂಡ ಸತತ ಮೂರು ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.

ಮೊದಲ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಉಕ್ರೇನ್‌ ತಂಡವನ್ನು 5–1 ರಲ್ಲಿ ಮಣಿಸಿ ಶುಭಾರಂಭ ಮಾಡಿದ ತಂಡ, ಕ್ವಾರ್ಟರ್‌ ಫೈನಲ್‌ನಲ್ಲಿ 6–0 ರಲ್ಲಿ ಬ್ರಿಟನ್‌ ವಿರುದ್ಧ ಜಯ ಸಾಧಿಸಿತು. ಸೆಮಿಫೈನಲ್‌ನಲ್ಲಿ ಕೆಲವೊಂದು ಆತಂಕದ ಕ್ಷಣಗಳನ್ನು ಎದುರಿಸಿತಾದರೂ, 5–3 ರಲ್ಲಿ ಟರ್ಕಿ ವಿರುದ್ಧ ಗೆಲುವು ಪಡೆಯಿತು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡ ಚೀನಾ ತೈಪೆಯ ಸವಾಲು ಎದುರಿಸಲಿದೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಲೀ ಚಿಯೆನ್–ಯಿಂಗ್‌ ಅವರನ್ನೊಳಗೊಂಡ ಚೀನಾ ತೈಪೆ ತಂಡ ಮೂರನೇ ಶ್ರೇಯಾಂಕ ಹೊಂದಿದೆ.

ಪುರುಷರಿಗೆ ನಿರಾಸೆ: ಭಾರತ ಪುರುಷರ ರಿಕರ್ವ್‌ ತಂಡ ಮೊದಲ ಸುತ್ತಿನಲ್ಲಿ 4–5 ರಲ್ಲಿ ಸ್ವಿಟ್ಜರ್‌ಲೆಂಡ್‌ ಎದುರು ಸೋತು ಹೊರಬಿದ್ದಿತು. ತರುಣ್‌ದೀಪ್‌ ರಾಯ್, ಜಯಂತ್‌ ತಾಲುಕ್ದರ್ ಮತ್ತು ಪ್ರವೀಣ್ ಜಾಧವ್‌ ಅವರನ್ನೊಳಗೊಂಡ ಭಾರತ, ಎಂಟನೇ ಶ್ರೇಯಾಂಕ ಪಡೆದುಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT