ಶುಕ್ರವಾರ, ಮೇ 14, 2021
31 °C

ಏಷ್ಯನ್ ವೇಟ್‌ಲಿಫ್ಟಿಂಗ್‌: ಅಚಿಂತಗೆ ಎರಡನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಾಷ್ಕೆಂಟ್‌ : ಭಾರತದ ಅಚಿಂತ ಶೆವುಲಿ ಅವರು ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 73 ಕೆಜಿ ವಿಭಾಗದ ಬಿ ಗುಂಪಿನ ಸ್ಫರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.

ಕಾಮನ್ವೆಲ್ತ್ ಚಾಂಪಿಯನ್‌ಷಿಪ್‌ ಚಿನ್ನದ ಪದಕ ವಿಜೇತ ಅಚಿಂತ, ಮಂಗಳವಾರ 309 ಕೆಜಿ (ಸ್ನ್ಯಾಚ್‌ 139 ಮತ್ತು ಕ್ಲೀನ್ ಆ್ಯಂಡ್ ಜೆರ್ಕ್‌ 170) ಭಾರ ಎತ್ತಿದರು. ಕ್ಲೀನ್ ಆ್ಯಂಡ್ ಜೆರ್ಕ್‌ನಲ್ಲಿ 174 ಕೆಜಿ ಭಾರ ಎತ್ತಿದ್ದರೆ ಅವರು ಮೊದಲ ಸ್ಥಾನ ಪಡೆಯಬಹುದಿತ್ತು.

ಕಜಕಸ್ತಾನದ ಸೈರಾಮ್‌ಕೆಜ್‌ ಅಕ್ಮೊಲ್ಡಾ 310 ಕೆಜಿ (130+180) ಈ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರು.

ಎ ಗುಂಪಿನ ಸ್ಪರ್ಧೆಗಳು ಮುಗಿದ ಬಳಿಕ ಸ್ಥಾನಗಳನ್ನು ಅಧಿಕೃತವಾಗಿ ನಿರ್ಧರಿಸಲಾಗುತ್ತದೆ.

ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ಇದುವರೆಗೆ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಮೀರಾಬಾಯಿ ಚಾನು (49 ಕೆಜಿ ವಿಭಾಗ) ಕಂಚು ಹಾಗೂ ಜಿಲ್ಲಿ ಡಲಾಬೆಹರಾ (45 ಕೆಜಿ) ಚಿನ್ನ ಗೆದ್ದುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು