ಭಾನುವಾರ, ಮೇ 22, 2022
26 °C

ವಿಕ್ಟೋರಿಯಾದಲ್ಲಿ 2026ರ ಕಾಮನ್ವೆಲ್ತ್ ಗೇಮ್ಸ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸಿಡ್ನಿ: ಕಾಮನ್ವೆಲ್ತ್ ಗೇಮ್ಸ್‌ನ 2026ರ ಆವೃತ್ತಿ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ನಡೆಯಲಿದೆ ಎಂದು ರಾಜ್ಯದ ಮುಖ್ಯಸ್ಥ ಡ್ಯಾನಿಯಲ್ ಅ್ಯಂಡ್ರ್ಯೂಸ್ ತಿಳಿಸಿದ್ದಾರೆ.

ರಾಜಧಾನಿ ಮೆಲ್ಬರ್ನ್‌ನಿಂದ ಹೊರಗೆ ಎಲ್ಲ ಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು ಏಳು ಪಟ್ಟಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಪಟ್ಟಣಗಳು ನಾಲ್ಕು ಪ್ರಾದೇಶಿಕ ವಿಭಾಗಗಳಲ್ಲಿ ಇವೆ ಎಂದು ಅವರು ತಿಳಿಸಿದ್ದಾರೆ.  

ಗೀಲಾಂಗ್‌, ಬಲಾರತ್‌, ಬೆಂಡಿಗೊ ಮತ್ತು ಗಿಪ್ಸ್‌ಲ್ಯಾಂಡ್‌ನಲ್ಲಿ ಪ್ರಮುಖ ಸ್ಪರ್ಧೆಗಳು ನಡೆಯಲಿದ್ದು ಅಲ್ಲಿ ಈಗಾಗಲೇ ಕ್ರೀಡಾ ಗ್ರಾಮಗಳು ಇವೆ. ವಿಕ್ಟೋರಿಯಾದ ಕ್ರೀಡಾಂಗಣವು ಹೊಸತನದಿಂದ ಕೂಡಿದ್ದು ಹೊಸ ಆವಿಷ್ಕಾರದ ಮೂಲಕ ಗಮನ ಸೆಳೆದಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್‌ನ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಅಭಿಪ್ರಾಯಪಟ್ಟಿದ್ದಾರೆ.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.