ಹೊಸಪೇಟೆ: ‘ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ಆಫ್ ವಿಜಯನಗರ’ ಸಂಸ್ಥೆಯು ಆಯೋಜಿಸಿರುವ ಹಂಪಿ ಮೋಟಾರ್ ಸ್ಪೋರ್ಟ್ಸ್ ಆಟೊ ಕ್ರಾಸ್ ರೇಸ್‌ಗೆ ಶುಕ್ರವಾರ ಸಂಜೆ ನಗರದಲ್ಲಿ ಚಾಲನೆ ನೀಡಲಾಯಿತು.

ನಗರದ ಮಲ್ಲಿಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಿವೈಎಸ್ಪಿ ವಿ. ರಘುಕುಮಾರ ಅವರು ರೇಸ್‌ಗೆ ಹಸಿರು ನಿಶಾನೆ ತೋರಿದರು. ಶನಿವಾರ (ಫೆ.6) ಬೆಳಿಗ್ಗೆ 8ಕ್ಕೆ ನಗರದ ಬಳ್ಳಾರಿ ರಸ್ತೆಯ ಪಿವಿಎಸ್‌ಬಿಸಿ ಚಾರಿಟೇಬಲ್ ಟ್ರಸ್ಟ್‌ಗೆ ಸೇರಿದ ಬಯಲಿನಲ್ಲಿ ಆಟೊ ಕ್ರಾಸ್ ರೇಸ್ ನಡೆಯಲಿದೆ. ಎರಡು ಸಮನಾಂತರ ಟ್ರ್ಯಾಕ್‌ಗಳಲ್ಲಿ ಒಟ್ಟಿಗೆ ಎರಡು ಕಾರುಗಳು ಸ್ಪರ್ಧೆ ನಡೆಸಲಿವೆ.

ಒಟ್ಟು 19 ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದೆ. ಟಾಪ್ ಹತ್ತರಲ್ಲಿ ಬಂದವರು ಅಪೆಕ್ಸ್ ವಿಭಾಗಕ್ಕೆ ಆಯ್ಕೆಯಾಗುತ್ತಾರೆ. ಅದರಲ್ಲಿ ಪ್ರಥಮ ಸ್ಥಾನದಲ್ಲಿ ಬಂದವರಿಗೆ ‘ಡರ್ಟ್ ಕಿಂಗ್ ಆಫ್ ಹಂಪಿ’ ಪ್ರಶಸ್ತಿ, ₹1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಒಟ್ಟು 92 ಸ್ಪರ್ಧಿಗಳು ಸ್ಪರ್ಧೆಗೆ ಹೆಸರು ನೋಂದಣಿ ಮಾಡಿಸಿದ್ದಾರೆ.

ಫೆ. 7ರಂದು ತಾಲ್ಲೂಕಿನ ಧರ್ಮಸಾಗರ, ಜಂಬುನಾಥಹಳ್ಳಿ ಕಾರ್ ರೇಸ್ ಸ್ಪರ್ಧೆ ಜರುಗಲಿದೆ. ಆರು ವಿಭಾಗಗಳಲ್ಲಿ ನಡೆಯಲಿರುವ ಸ್ಪರ್ಧೆಗೆ 12 ಜನ ಹೆಸರು ನೋಂದಾಯಿಸಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಎಚ್.ಎಂ. ಸಂತೋಷ, ಗೌತಮ್, ಚಿರುವೊಲು, ರೋಹಿತ್ ಗೌಡ, ದರ್ಪನ್‌ಗೌಡ, ಕಾರ್ತಿಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.