ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಸಾತ್ವಿಕ್‌ಸಾಯಿರಾಜ್‌– ಚಿರಾಗ್‌ ಜಯಭೇರಿ

Last Updated 14 ಡಿಸೆಂಬರ್ 2021, 12:54 IST
ಅಕ್ಷರ ಗಾತ್ರ

ಹುವೆಲ್ವಾ, ಸ್ಪೇನ್‌: ಹಾಲಿ ಚಾಂಪಿಯನ್‌, ಭಾರತದ ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್‌ ಮತ್ತು ಕಿದಂಬಿ ಶ್ರೀಕಾಂತ್ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಮಂಗಳವಾರ21-7, 21-9ರಿಂದ ಸ್ಲೊವೇಕಿಯಾದ ಮಾರ್ಟಿನಾ ರೆಪಿಸ್ಕಾ ಅವರ ಸವಾಲು ಮೀರಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಸಿಂಧು, ಶ್ರೇಯಾಂಕರಹಿತ ಆಟಗಾರ್ತಿಯನ್ನು ಮಣಿಸಲು ಕೇವಲ 24 ನಿಮಿಷಗಳನ್ನು ತೆಗೆದುಕೊಂಡರು. 2019ರಲ್ಲಿ ಪ್ರಶಸ್ತಿ ಜಯಿಸಿರುವ ಸಿಂಧು, ಮೊದಲ ಗೇಮ್‌ನ ಆರಂಭದಲ್ಲಿ 4–1ರ ಮುನ್ನಡೆ ಗಳಿಸಿದರು. ರೆಪಿಸ್ಕಾ ತಿರುಗೇಟು ನೀಡಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಕೇವಲ 10 ನಿಮಿಷಗಳಲ್ಲಿ ಈ ಗೇಮ್‌ ಎರಡು ಬಾರಿಯ ಒಲಿಂಪಿಕ್ಸ್ ಪದಕಕ ವಿಜೇತೆ ಸಿಂಧು ಕೈವಶವಾಯಿತು.

ಎರಡನೇ ಗೇಮ್‌ನಲ್ಲೂ ಹೆಚ್ಚೇನೂ ವ್ಯತ್ಯಾಸವಾಗಲಿಲ್ಲ. ಆರಂಭದಲ್ಲಿ 6–0ಯಿಂದ ಮುನ್ನಡೆದ ಸಿಂಧು, ವಿರಾಮದ ವೇಳೆಗೆ ಅದನ್ನು 11–1ಕ್ಕೆ ಕೊಂಡೊಯ್ದರು. ನಂತರದ ಆಟದಲ್ಲೂ ಪಾರಮ್ಯ ಮೆರೆದರು.

ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಜಿದ್ದಾಜಿದ್ದಿ ಹಣಾಹಣಿಯಲ್ಲಿ ಲಕ್ಷ್ಯ22-20, 15-21, 21-18ರಿಂದ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಮಣಿಸಿದರು. ಕಿದಂಬಿ ಶ್ರೀಕಾಂತ್‌15-21, 21-18, 21-17ರಿಂದ ಚೀನಾದ ಲೀ ಶಿ ಫೆಂಗ್‌ ಎದುರು ಗೆದ್ದರು.

ಲಕ್ಷ್ಯ ಅವರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಕೂಡ ಮೊದಲ ಸುತ್ತಿನ ತಡೆ ದಾಟಿದರು. 43 ನಿಮಿಷಗಳ ಪಂದ್ಯದಲ್ಲಿ ಭಾರತದ ಜೋಡಿಯು27-25, 21-17ರಿಂದ ಚೀನಾ ತೈಪೆಯ ಲೀ ಜೆ ಹುಯಿ ಮತ್ತು ಯಾಂಗ್ ಪೊ ಸುವಾನ್ ಅವರನ್ನು ಮಣಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಸೌರಭ್ ಶರ್ಮಾ– ಅನುಷ್ಕಾ ಪಾರೀಖ್ 8–21, 18–21ರಿಂದ ಮಲೇಷ್ಯಾದ ತಾನ್‌ ಕಿಯನ್‌ ಮೆಂಗ್‌– ಲಾಯಿ ಪೆ ಜಿಂಗ್ ಎದುರು ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT