ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಸ್ಕೆಟ್‌ಬಾಲ್: ಸೆಮಿಫೈನಲ್‌ಗೆ ಜೈನ್‌, ಮೈಕಾ

‘ಚಾಲೆಂಜರ್ಸ್‌ ಕಪ್‌’ ಅಂತರರಾಜ್ಯ ಪದವಿ ಕಾಲೇಜು ಮಟ್ಟದ ಟೂರ್ನಿ
Last Updated 26 ನವೆಂಬರ್ 2022, 18:44 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಮೈಕಾ ಕಾಲೇಜು ತಂಡಗಳು ಇಲ್ಲಿ ನಡೆಯುತ್ತಿರುವ ‘ಚಾಲೆಂಜರ್ಸ್‌ ಕಪ್‌’ ಅಂತರರಾಜ್ಯ ಪದವಿ ಕಾಲೇಜು ಬ್ಯಾಸ್ಕೆಟ್‌ ಬಾಲ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿವೆ.

ಮೈಸೂರು ವಿಶ್ವವಿದ್ಯಾಲಯದ ಬ್ಯಾಸ್ಕೆಟ್‌ಬಾಲ್‌ ಅಂಗಳದಲ್ಲಿ ಶನಿವಾರ ನಡೆದ ಲೀಗ್‌ ಹಂತದ ಪಂದ್ಯಗಳಲ್ಲಿ ಮೈಕಾ ತಂಡವು 80–78 ಪಾಯಿಂಟ್‌ ಅಂತರದಲ್ಲಿ ಸೇಲಂನ ಎವಿಎಸ್‌ ಕಾಲೇಜು ವಿರುದ್ಧ ರೋಚಕ ಗೆಲುವು ದಾಖಲಿಸಿದರೆ, ಜೈನ್ ವಿಶ್ವವಿದ್ಯಾಲಯ ತಂಡವು64–15ರಿಂದ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜು ತಂಡವನ್ನು ಮಣಿಸಿತು.

ಮೈಕಾ ತಂಡದ ಪರ ಕ್ಷಿತಿಜ್ (22 ಪಾಯಿಂಟ್‌) ಹಾಗೂ ಜೈನ್‌ ವಿಶ್ವವಿದ್ಯಾಲಯದ ಜೋಶ್ವಾ (12 ಪಾಯಿಂಟ್‌) ಮಿಂಚಿನ ಆಟವಾಡಿದರು.

ಸೆಮಿಗೆ ಲೊಯೊಲಾ, ಸತ್ಯಭಾಮ: ಚೆನ್ನೈನ ಲೊಯೊಲಾ ಕಾಲೇಜು ತಂಡದವರು 66–51 ಪಾಯಿಂಟ್‌ಗಳಿಂದ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಂಡದ ವಿರುದ್ಧ ಜಯಗಳಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು. ಲೊಯೊಲಾ ಪರ ವೈಶಾಖ್ 17 ಪಾಯಿಂಟ್‌ ಕಾಣಿಕೆ ನೀಡಿದರೆ, ಬೆಂಗಳೂರು ತಂಡದ ಮದನ್‌ ಮಣಿ 15 ಪಾಯಿಂಟ್ ಕಲೆ ಹಾಕಿದರು.

ಮತ್ತೊಂದು ಪಂದ್ಯದಲ್ಲಿ ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯ ತಂಡದವರು 81–51 ಪಾಯಿಂಟ್‌ಗಳಿಂದ ಸೇಲಂನ ಎವಿಎಸ್‌ ಕಾಲೇಜು ತಂಡದವರನ್ನು ಮಣಿಸಿದರು. ಮಿಂಚಿನ ಆಟವಾಡಿದ ಸತ್ಯಭಾಮ ತಂಡದ ಪ್ರವೀಣ್‌ 25 ಪಾಯಿಂಟ್‌ ತಂದುಕೊಟ್ಟರೆ, ಎವಿಎಸ್‌ ತಂಡದ ಪರ ಖಲೀಲ್‌ 15 ಪಾಯಿಂಟ್‌ ಕಲೆಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT