ಶನಿವಾರ, ಮಾರ್ಚ್ 6, 2021
32 °C

ಚೀನಾದಲ್ಲಿ ಬ್ಯಾಸ್ಕೆಟ್‌ಬಾಲ್‌ ಫುನರಾರಂಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಡೊಂಗುವಾನ್‌ನಲ್ಲಿ ನಡೆದ ಪಂದ್ಯದಲ್ಲಿ ಚೆಂಡು ಹಿಡಿತಕ್ಕೆ ಪಡೆಯಲು ಆಟಗಾರರ ಮಧ್ಯೆ ಪೈಪೋಟಿ–ಎಎಫ್‌ಪಿ ಚಿತ್ರ

ಶಾಂಘೈ: ಚೀನಾದಲ್ಲಿ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (ಸಿಬಿಎ) ಲೀಗ್‌ ಆರಂಭಗೊಂಡಿದೆ. ಕೊರೊನಾ ವೈರಾಣುವಿನ ಹಾವಳಿಯ ಹಿನ್ನೆಲೆಯಲ್ಲಿ ಐದು ತಿಂಗಳು ಸ್ಥಗಿತಗೊಂಡಿದ್ದ ಟೂರ್ನಿಗೆ ಶನಿವಾರ ಪ್ರೇಕ್ಷಕರಿಲ್ಲದೆ ಚಾಲನೆ ಸಿಕ್ಕಿತು.

ಇಲ್ಲಿನ ಕಿಂಗ್‌ಡಾವೊ ಕ್ರೀಡಾಂಗಣದಲ್ಲಿ ಆರಂಭಗೊಂಡ ಸಿಬಿಎ ಲೀಗ್‌ ಪಂದ್ಯಗಳಲ್ಲಿ ಗ್ಯಾಲರಿಗಳಲ್ಲಿ ಮೌನ ಮನೆ ಮಾಡಿತ್ತು. ವೈರಾಣು ಉಪಟಳದ ಬಳಿಕ ಚೀನಾದಲ್ಲಿ ಆರಂಭಗೊಂಡ ಮೊದಲ ಕ್ರೀಡಾ ಲೀಗ್‌ ಇದು.

ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಲೀಗ್ ಅನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪು ಈಶಾನ್ಯ ಭಾಗದ ಕಿಂಗ್‌ಡಾವ್‌ದಲ್ಲಿ ಆಡುತ್ತಿದ್ದರೆ, ಇನ್ನೊಂದು ದಕ್ಷಿಣದ ನಗರ ಡಾಂಗ್‌ಗುವಾನ್‌ನಲ್ಲಿ ಕಣಕ್ಕಿಳಿಯುತ್ತಿದೆ.

ಚೀನಾದಲ್ಲಿ ಕೊರೊನಾ ವೈರಾಣು ಸೋಂಕು ಪ್ರಕರಣಗಳಲ್ಲಿ ಗಣನೀಯ ಕುಸಿತ ಕಂಡಿದ್ದರೂ, ರಾಜಧಾನಿ ಬೀಜಿಂಗ್‌ನಲ್ಲಿ  ಪ್ರಕರಣಗಳ ಏರಿಕೆ ಆ ದೇಶದ ಕಳವಳಕ್ಕೆ ಕಾರಣವಾಗಿದೆ.

ಚೀನಾದಲ್ಲಿ ಶನಿವಾರ 23 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು