ಬುಧವಾರ, ನವೆಂಬರ್ 20, 2019
20 °C

ಬ್ಯಾಸ್ಕೆಟ್‌ಬಾಲ್: ಡಿವೈಇಎಸ್, ಬೀಗಲ್ಸ್‌ಗೆ ಜಯ

Published:
Updated:
Prajavani

ಬೆಂಗಳೂರು: ಇಲ್ಲಿಯ ಡಿವೈಇಎಸ್ ಪುರುಷರ ಮತ್ತು ಬೀಗಲ್ಸ್‌ ಮಹಿಳೆಯರ ತಂಡವು ಕಂಠೀರವ ಒಳಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಅಸೋಸಿಯೇಷನ್ ಕಪ್ ಚಾಂಪಿಯನ್‌ಷಿಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಜಯಿಸಿದವು.

ಪುರುಷರ ವಿಭಾಗದಲ್ಲಿ ಡಿವೈಇಎಸ್‌ ತಂಡವು 65–37ರಿಂದ ಬೆಂಗಳೂರು ಸ್ಪೋರ್ಟಿಂಗ್‌ ವಿರುದ್ಧ ಜಯಿಸಿತು. ಡಿವೈಇಎಸ್‌ ತಂಡದ ರವಿ (10) ಉತ್ತಮವಾಗಿ ಆಡಿದರು. ಪಂದ್ಯದ ಮೊದಲಾರ್ಧದಲ್ಲಿ ಡಿವೈಇಎಸ್ ತಂಡವು 22–15ರಿಂದ ಮುಂದಿತ್ತು. ನಂತರದ ಅವಧಿಯಲ್ಲಿ  ಸಂಪೂರ್ಣ ಮೇಲುಗೈ ಸಾಧಿಸಿತು. ಸ್ಪೋರ್ಟಿಂಗ್ ಪರವಾಗಿ ಇಶಾನ್ 11 ಪಾಯಿಂಟ್ಸ್‌ ಗಳಿಸಿದರು.

ಪುರುಷರ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಬ್ಲ್ಯೂಸ್‌ ತಂಡವು 62–23ರಿಂದ ಮೈಸೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ವಿರುದ್ಧ ಜಯಿಸಿತು. ಬ್ಲ್ಯೂಸ್‌ನ ಬೆಂಜಮಿನ್ (13) ಮತ್ತು ಮೈಸೂರಿನ ಪೌರುಷ್ (8) ಪಾಯಿಂಟ್ ಗಳಿಸಿದರು. ಎಂ.ಇ.ಜಿ ತಂಡವು 63–12ರಿಂದ ರಾಜಕುಮಾರ್ ಬಿಸಿ ವಿರುದ್ಧ ಜಯಿಸಿತು. ಎಂ.ಇ.ಜಿಯ ಅಭಿಷೇಕ್ (23 ಅಂಕ) ಮಿಂಚಿದರು. ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು 54–25ರಿಂದ ಹೊಯ್ಸಳ ಹಾಸನದ ವಿರುದ್ಧ ಗೆದ್ದಿತು. ವಿಮಾನಪುರ ತಂಡವು 56–26ರಿಂದ ಒಮೇಗಾ ಎಸ್‌ಸಿ ವಿರುದ್ಧ ಜಯಗಳಿಸಿತು.

ಮಹಿಳೆಯರ ವಿಭಾಗದಲ್ಲಿ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು 63–30ರಿಂದ ವಿಜಯಪುರದ ಡಿವೈಇಎಸ್‌ ತಂಡದ ವಿರುದ್ಧ ಗೆದ್ದರು. ಮೊದಲಾರ್ಧದಲ್ಲಿ 36–10ರಿಂದ ಮುಂದಿದ್ದ ಬೀಗಲ್ಸ್‌ ತಂಡವು ಎರಡನೇ ಅವಧಿಯಲ್ಲಿ 27 ಪಾಯಿಂಟ್ಸ್‌ ಗಳಿಸಿತು. ಇನ್ಜುಳಿದ ಪಂದ್ಯಗಳಲ್ಲಿ ಮೈಸೂರಿನ ಡಿವೈಇಎಸ್‌ 61–24 ರಿಂದ ಸಿಜೆಸಿ ವಿರುದ್ಧ; ವಿದ್ಯಾನಗರದ ಡಿವೈಇಎಸ್ 73–37ರಿಂದ ನ್ಯಾಷನಲ್ ಮೈಸೂರು ವಿರುದ್ಧ; ವಿಮಾನಪುರ 34–9ರಿಂದ ಮೈಸೂರು ಬಿಸಿ ವಿರುದ್ಧ ಮತ್ತು ಮೌಂಟ್ಸ್‌ ಕ್ಲಬ್ 60–27 ರಿಂದ ಪಟ್ಟಾಭಿರಾಮ್ ಸ್ಫೋರ್ಟ್ಸ್‌ ಕ್ಲಬ್ ವಿರುದ್ಧ ಗೆದ್ದಿತು.

ಪ್ರತಿಕ್ರಿಯಿಸಿ (+)