ಗುರುವಾರ , ಆಗಸ್ಟ್ 18, 2022
23 °C

ಎಫ್ಐಎಚ್‌ ಅಧ್ಯಕ್ಷರಾಗಿ ನರಿಂದರ್ ಬಾತ್ರಾ ಪುನರಾಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಅಧ್ಯಕ್ಷರಾಗಿ ನರಿಂದರ್ ಬಾತ್ರಾ ಪುನರಾಯ್ಕೆಯಾಗಿದ್ದಾರೆ. ಶನಿವಾರ ವರ್ಚುವಲ್ ಆಗಿ ನಡೆದ ಫೆಡರೇಷನ್‌ನ 47ನೇ ಸಮಾವೇಶದಲ್ಲಿ ಆಯ್ಕೆ ನಡೆಯಿತು. ಅವರ ಅಧಿಕಾರ ಅವಧಿ 2024ರ ವರೆಗೆ ಇರುತ್ತದೆ.

ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರೂ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರೂ ಆಗಿರುವ ಬಾತ್ರಾ ಪ್ರತಿಸ್ಪರ್ಧಿ ಬೆಲ್ಜಿಯಂ ಹಾಕಿ ಫೆಡರೇಷನ್‌ನ ಅಧ್ಯಕ್ಷ ಮಾರ್ಕ್ ಕೊಡ್ರಾನ್‌ ಎರಡು ಮತಗಳಿಂದ ಮಣಿಸಿದರು.

ಆನ್‌ಲೈನ್ ಮೂಲಕ ನಡೆದ ಮತದಾನದಲ್ಲಿ 124 ಸದಸ್ಯ ಸಂಸ್ಥೆಗಳು ಪಾಲ್ಗೊಂಡಿದ್ದವು. ಬಾತ್ರಾ ಅವರಿಗೆ 63 ಮತಗಳು ಲಭಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು