ಭಾನುವಾರ, ಜುಲೈ 3, 2022
22 °C
ಮನಮುದಗೊಳಿಸಿದ ವೈವಿಧ್ಯಮಯ ಕಾರ್ಯಕ್ರಮ; ರೋಮಾಂಚನಗೊಳಿಸಿದ ನೃತ್ಯಪಟುಗಳು

ಚಳಿಗಾಲದ ಒಲಿಂಪಿಕ್ಸ್‌ಗೆ ವೈಭವದ ತೆರೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ವರ್ಣರಂಜಿತ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡ ಮೋಹಕ ವಾತಾವರಣದಲ್ಲಿ ಚಳಿಗಾಲದ ಒಲಿಂಪಿಕ್ಸ್‌ಗೆ ಭಾನುವಾರ ತೆರೆ ಬಿದ್ದಿತು. ಕ್ರೀಡಾ ವೈಭವ ಮೆರೆದ ಮತ್ತು ಮೈಲುಗಲ್ಲುಗಳು ಸ್ಥಾಪನೆಯಾದ ಒಲಿಂಪಿಕ್ಸ್‌ನಲ್ಲಿ ರಷ್ಯಾದ ಡೋಪಿಂಗ್ ಪ್ರಕರಣ ಕಪ್ಪುಚುಕ್ಕೆಯಾಗಿ ಪರಿಣಮಿಸಿತು.   

ಎಯ್ಲೀನ್ ಗೂ ಅವರಂಥ ಹೊಸ ತಾರೆಗಳ ಉದಯಕ್ಕೆ ಕಾರಣವಾದ ಒಲಿಂಪಿಕ್ಸ್‌ನಲ್ಲಿ 15 ವರ್ಷದ ಫಿಗರ್ ಸ್ಕೇಟರ್ ಕಮಿಲ ವಲೀವಾ ಡೋಪಿಂಗ್ ವಿವಾದಕ್ಕೆ ಕಾರಣರಾಗಿದ್ದಾರೆ. ಕೋವಿಡ್‌–19ರ ಆತಂಕದಿಂದಾಗಿ ಬಯೊ ಬಬಲ್‌ನಲ್ಲಿ ಕಳೆದರೂ ಕ್ರೀಡಾಪಟುಗಳು ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಿದರು.

‘ಬರ್ಡ್ಸ್‌ ನೆಸ್ಟ್’ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಲ್ಗೊಂಡಿದ್ದರು.

ಪ್ರೇಕ್ಷಕರು ಅಂತರ ಕಾಯ್ದುಕೊಂಡು ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಮಂಜಿನ ಆವರಣದ ಕಾರ್ಯಕ್ರಮವು ಪ್ರೇಕ್ಷಕರನ್ನು ಮುದಗೊಳಿಸಿತು. 

ಅಮೆರಿಕದ 22ರ ಹರೆಯದ ಅಥ್ಲೀಟ್ ನಥಾನ್ ಚೆನ್‌ ಅವರು ಎರಡು ಬಾರಿಯ ಚಾಂಪಿಯಹ್ ಜಪಾನ್‌ನ ಯುಜುರು ಹನ್ಯು ಅವರನ್ನು ಹಿಂದಿಕ್ಕಿ ಚಿನ್ನ ಗೆದ್ದಿದ್ದರು.

ಅಮೆರಿಕದ ಸ್ನೋಬೋರ್ಡ್ ಅಥ್ಲೀಟ್ 35 ವರ್ಷದ ಶಾನ್ ವೈಟ್ ಕೂಡ ಗಮನಾರ್ಹ ಸಾಧನೆ ಮಾಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು