ಪುಣೆ: ಸೊಗಸಾದ ಆಟವಾಡಿದ ಪುಣೇರಿ ಪಲ್ಟನ್ ತಂಡದವರು ಪ್ರೊ ಕಬಡ್ಡಿ ಲೀಗ್ನಲ್ಲಿ 43–27 ಪಾಯಿಂಟ್ಸ್ಗಳಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದರು.

ಈ ಋತುವಿನಲ್ಲಿ ಎಂಟನೇ ಗೆಲುವು ಸಾಧಿಸಿದ ಪಲ್ಟನ್, ಪಾಯಿಂಟ್ಗಳನ್ನು 49ಕ್ಕೆ ಹೆಚ್ಚಿಸಿಕೊಂಡು ಮತ್ತೆ ಅಗ್ರಸ್ಥಾನಕ್ಕೇರಿತು.

ಆಕಾಶ್ ಶಿಂಧೆ (10 ಪಾಯಿಂಟ್ಸ್), ಅಸ್ಲಂ ಇನಾಂದಾರ್ (9 ಪಾಯಿಂಟ್ಸ್) ಮತ್ತು ಮೋಹಿತ್ ಗೋಯತ್ (8 ಪಾಯಿಂಟ್ಸ್) ಅವರು ಪುಣೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲ ನಿಮಿಷದಿಂದಲೇ ಮಿಂಚಿನ ಆಟವಾಡಿದ ಪಲ್ಟನ್ ಬೇಗನೇ ಎದುರಾಳಿಯನ್ನು ಆಲೌಟ್ ಮಾಡಿ 11–1 ರಲ್ಲಿ ಮುನ್ನಡೆ ಸಾಧಿಸಿತು.

ಮಣಿಂದರ್ ಸಿಂಗ್ ಅವರ ಚಾಕಚಕ್ಯತೆಯ ರೇಡಿಂಗ್ನ ಬಲದಿಂದ ಮರುಹೋರಾಟ ನಡೆಸಿದ ವಾರಿಯರ್ಸ್, ಎದುರಾಳಿ ತಂಡವನ್ನು ಆಲೌಟ್ ಮಾಡಿತು. ಆದರೂ ವಿರಾಮದ ವೇಳೆಗೆ ವಿಜಯಿ ತಂಡ 24–13 ರಲ್ಲಿ ಮುನ್ನಡೆಯಲ್ಲಿತ್ತು.

ಎರಡನೇ ಅವಧಿಯಲ್ಲೂ ಪ್ರಾಬಲ್ಯ ಮರೆದ ಪಲ್ಟನ್ ಪಾಯಿಂಟ್ಗಳನ್ನು ಕಲೆಹಾಕುತ್ತಾ ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿತು. ಮುನ್ನಡೆಯನ್ನು 33–14 ರಲ್ಲಿ ಹೆಚ್ಚಿಸಿ ಭಾರಿ ಅಂತರದಿಂದ ಗೆದ್ದಿತು.

ವಾರಿಯರ್ಸ್ ತಂಡದ ಮಣಿಂದರ್ 14 ಪಾಯಿಂಟ್ಸ್ ಗಳಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ದಿನದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 33–32 ರಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿ ಸಿತು. 14 ಪಾಯಿಂಟ್ಸ್ ತಂದಿತ್ತ ರೇಡರ್, ಮಂಜೀತ್ ಅವರು ಸ್ಟೀಲರ್ಸ್ ತಂಡದ ರೋಚಕ ಗೆಲುವಿಗೆ ಕಾರಣರಾದರು. ಗುಜರಾತ್ ಪರ ರೇಡರ್ಗಳಾದ ರಾಕೇಶ್ (7 ಪಾಯಿಂಟ್ಸ್) ಮತ್ತು ಚಂದ್ರನ್ ರಂಜೀತ್ (8) ಅವರ ಆಟ ವ್ಯರ್ಥವಾಯಿತು.

ಆರಂಭದಿಂದ ಜಿದ್ದಾಜಿದ್ದಿ ಪೈಪೋಟಿ ನಡೆದ ಪಂದ್ಯದಲ್ಲಿ ಮೊದಲಾರ್ಧದ ವೇಳೆ ಹರಿಯಾಣ 21–16ರಲ್ಲಿ ಮುಂದಿತ್ತು. ದ್ವಿತೀಯಾರ್ಧದಲ್ಲಿ ಗುಜರಾತ್ ಪುಟಿದೆದ್ದರೂ ಒಂದು ಪಾಯಿಂಟ್ನಿಂದ ಸೋಲು ಕಂಡಿತು.

ಇಂದಿನ ಪಂದ್ಯಗಳು
*ಜೈಪುರ ಪಿಂಕ್ ಪ್ಯಾಂಥರ್ಸ್– ಯು ಮುಂಬಾ
* ತೆಲುಗು ಟೈಟನ್ಸ್– ಬೆಂಗಳೂರು ಬುಲ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.