ಬುಧವಾರ, ಜನವರಿ 22, 2020
24 °C

ಅಥ್ಲೆಟಿಕ್ಸ್‌: ತಾರಾ, ಹಲೀಮಾ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ತಾರಾ ಬನ್ಸಿ ಮತ್ತು ಹಲೀಮಾ ಫಜೀಲತ್ ಅವರನ್ನು ಒಳಗೊಂಡ ತಂಡ ಪಂಜಾಬ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 4x100 ಮೀಟರ್ಸ್‌ ರಿಲೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿತು.

ತಾರಾ ಕೋರಮಂಗಲದ ಬೆಥನಿ ಶಾಲಾ ವಿದ್ಯಾರ್ಥಿನಿ. ಹಲೀಮಾ ಫ್ರೇಜರ್ ಟೌನ್‌ನ ಎಸ್‌ಎಫ್‌ಎಕ್ಸ್ ವಿದ್ಯಾರ್ಥಿನಿ.

ಇಶಾ ರಾಮ್‌ತೆಕೆ ಮತ್ತು ಸಿಯಾ ಅಭಿಜಿತ್ ಅವರೂ ಒಳಗೊಂಡಿದ್ದ ತಂಡ 50.92 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 51.10 ಸೆಕೆಂಡುಗಳ ದಾಖಲೆಯನ್ನು ಮುರಿಯಿತು. ಮಹಾರಾಷ್ಟ್ರ ಬೆಳ್ಳಿ ಮತ್ತು ತಮಿಳುನಾಡು ಕಂಚು ಗಳಿಸಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು