ಸೋಮವಾರ, ಜೂನ್ 1, 2020
27 °C

ಗಾಲ್ಫ್‌: ರೋಹನಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಶ್ರೀಲಂಕಾದ ಅನುರ ರೋಹನಾ ಅವರು ಪಿಜಿಟಿಐ ಬೆಂಗಳೂರು ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಕರ್ನಾಟಕ ಗಾಲ್ಫ್‌ ಸಂಸ್ಥೆಯಲ್ಲಿ ಭಾನುವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 45 ವರ್ಷ ವಯಸ್ಸಿನ ರೋಹನಾ ಉತ್ತಮ ಸಾಮರ್ಥ್ಯ ತೋರಿದರು. ಈ ಮೂಲಕ ಒಟ್ಟು 269 ಸ್ಕೋರ್‌ ಕಲೆಹಾಕಿ ಚಾಂಪಿಯನ್ ಆದರು. ವೃತ್ತಿಪರ ಗಾಲ್ಫ್‌ನಲ್ಲಿ ಅವರು ಜಯಿಸಿದ ಆರನೇ ಟ್ರೋಫಿ ಇದಾಗಿದೆ.

ಪಟ್ನಾದ ಅಮನ್‌ ರಾಜ್‌ ರನ್ನರ್‌ ಅಪ್‌ ಆದರು. ಅವರು ಒಟ್ಟು 272 ಸ್ಕೋರ್‌ ಗಳಿಸಿದರು. ಆದಿಲ್‌ ಬೇಡಿ (273) ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು