ಬರ್ಮಿಂಗ್‌ಹ್ಯಾಮ್: ಉತ್ತಮ ಸಾಮರ್ಥ್ಯ ತೋರಿದ ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಭಾವಿನಾಬೆನ್ ಪಟೇಲ್ ಚಿನ್ನ ಜಯಿಸಿದರು. ಸೋನಾಲ್‌ಬೆನ್ ಪಟೇಲ್ ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾವಿನಾ, ಇಲ್ಲಿ ನಡೆದ ಮಹಿಳಾ ಸಿಂಗಲ್ಸ್ 3–5 ಕ್ಲಾಸ್ ವಿಭಾಗದ ಫೈನಲ್‌ನಲ್ಲಿ12-10, 11-2, 11-9ರಿಂದ ನೈಜೀರಿಯಾದ ಇಫೆಚುಕ್ವುದೆ ಕ್ರಿಸ್ಟಿಯನ್ ಇಕ್‌ಪೋಯಿ ಎದುರು ಗೆದ್ದರು.

ಬೀಜಿಂಗ್‌ನಲ್ಲಿ 2013ರಲ್ಲಿ ನಡೆದ ಏಷ್ಯನ್ ಪ್ಯಾರಾ ಟಿಟಿ ಚಾಂಪಿಯನ್‌ಷಿಪ್‌ನಲ್ಲಿ ಅವರಿಗೆ ಬೆಳ್ಳಿ ಒಲಿದಿತ್ತು.

3–5 ಕ್ಲಾಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇನ್ನೋರ್ವ ಆಟಗಾರ್ತಿ ಸೋನಾಲ್‌ಬೆನ್ ಕಂಚಿನ ಪದಕ ಜಯಿಸಿದರು. 34 ವರ್ಷದ ಆಟಗಾರ್ತಿ ಕಂಚಿನ ಪದಕದ ಸುತ್ತಿನಲ್ಲಿ11-5, 11-2, 11-3ರಿಂದ ಇಂಗ್ಲೆಂಡ್‌ನ ಸುಯಿ ಬೇಲಿ ಅವರನ್ನು ಪರಾಭವಗೊಳಿಸಿದರು.

ಪುರುಷರ ಸಿಂಗಲ್ಸ್ 3–5 ಕ್ಲಾಸ್ ವಿಭಾಗದ ಕಂಚಿನ ಪದಕದ ಹಣಾಹಣಿಯಲ್ಲಿ ರಾಜ್ ಅರವಿಂದನ್ ಅಲಗಾರ್ 3–11, 6–11, 9–11ರಿಂದ ನೈಜೀರಿಯಾದ ಇಸಾವು ಒಗುಂಕುನ್ಲೆ ಎದುರು ನಿರಾಸೆ ಅನುಭವಿಸಿದರು.

ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಸುಧೀರ್, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.