ಬುಧವಾರ, ಸೆಪ್ಟೆಂಬರ್ 22, 2021
29 °C

ಬೀಲ್ ಚೆಸ್‌ ಫೆಸ್ಟಿವಲ್‌: ರ‍್ಯಾಪಿಡ್‌ ವಿಭಾಗದಲ್ಲಿ ನಿಹಾಲ್ ಸರಿನ್‌ಗೆ 2ನೇ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಲ್‌, ಸ್ವಿಟ್ಜರ್ಲೆಂಡ್‌: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ನಿಹಾಲ್ ಸರಿನ್ ಅವರು ಬೀಲ್‌ ಚೆಸ್‌ ಫೆಸ್ಟಿವಲ್‌ನ ರ‍್ಯಾಪಿಡ್ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಟೂರ್ನಿಯಲ್ಲಿ ಅವರು ಒಟ್ಟು ನಾಲ್ಕು ಗೆಲುವು ಹಾಗೂ ಎರಡು ಡ್ರಾ ಸಾಧಿಸಿದರು.

17 ವರ್ಷದ ನಿಹಾಲ್‌ (ಇಎಲ್‌ಒ ರೇಟಿಂಗ್‌ 2620) ಅವರು ಭಾನುವಾರ ರಾತ್ರಿ ನಡೆದ ಕೊನೆಯ ಸುತ್ತಿನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಗಾಟಾ ಕಾಮ್‌ಸ್ಕಿ ಅವರೊಂದಿಗೆ ಡ್ರಾ ಸಾಧಿಸಿದರು. ಇದರೊಂದಿಗೆ ಅಮೆರಿಕದ ಆಟಗಾರನ ಸತತ ಐದು ಪಂದ್ಯಗಳ ಜಯದ ಓಟಕ್ಕೆ ತಡೆ ಹಾಕಿದರು.

ನಿಹಾಲ್‌ ಅವರು ಗಳಿಸಲು ಸಾಧ್ಯವಿದ್ದ 14 ಪಾಯಿಂಟ್ಸ್ ಪೈಕಿ 10 ಪಾಯಿಂಟ್ಸ್ ತಮ್ಮದಾಗಿಸಿಕೊಂಡರು. 11 ಪಾಯಿಂಟ್ಟ್ ಗಳಿಸಿದ ಕಾಮ್‌ಸ್ಕಿ ಮೊದಲ ಸ್ಥಾನ ಗಳಿಸಿದರು.

ಟೂರ್ನಿಯಲ್ಲಿ ನಿಹಾಲ್‌ ಅವರು ರಷ್ಯಾದ ಕಿರಿಲ್ ಅಲೆಕ್ಸೀಂಕೊ, ಇಸ್ರೇಲ್ ಗ್ರ್ಯಾಂಡ್‌ಮಾಸ್ಟರ್‌ ಬೊರಿಸ್ ಗೆಲ್‌ಫಾಂಡ್‌, ವಿನ್ಸೆಂಟ್ ಕೇಮರ್‌ ಮತ್ತು ಮ್ಯಾಕ್ಸಿಮ್‌ ಲಗಾರ್ಡ್‌ ಅವರಿಗೆ ಸೋಲಿನ ರುಚಿ ತೋರಿಸಿದರು. ಅಲನ್‌ ಪಿಚೊಟ್‌ ಮತ್ತು ಕಾಮ್‌ಸ್ಕಿ ಎದುರು ಸಮಬಲ ಸಾಧಿಸಿದರೆ, ಸ್ವಿಟ್ಜರ್ಲೆಂಡ್‌ನ ನೋಯಲ್ ಸ್ಟುಡರ್ ಎದುರಿನ ಪಂದ್ಯವನ್ನು ಕೈಚೆಲ್ಲಿದರು.

ಇಲ್ಲಿ ಭಾಗವಹಿಸಿದ ಎಂಟು ಆಟಗಾರರು ಮಂಗಳವಾರ ಆರಂಭವಾಗುವ ಕ್ಲಾಸಿಕಲ್ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ. ಇದೇ 31ರಂದು ಬ್ಲಿಟ್ಜ್ ವಿಭಾಗದ ಸ್ಪರ್ಧೆಗಳು ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು