ಪ್ರೊ ವಾಲಿಬಾಲ್ ಲೀಗ್‌: ಕೊಚ್ಚಿಗೆ ಜಯ

7

ಪ್ರೊ ವಾಲಿಬಾಲ್ ಲೀಗ್‌: ಕೊಚ್ಚಿಗೆ ಜಯ

Published:
Updated:

ಕೊಚ್ಚಿ: ತವರಿನ ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿದ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡ ಚೊಚ್ಚಲ ಪ್ರೊ ವಾಲಿಬಾಲ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ರಾಜೀವಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೌಂಡ್‌ ರಾಬಿನ್‌ ಹಂತದ ಪಂದ್ಯದಲ್ಲಿ ಯು ಮುಂಬಾ ವಾಲಿಯನ್ನು ಸ್ಪೈಕರ್ಸ್‌ ಎದುರು 4–1ರಿಂದ ಮಣಿಸಿತು.

ಮೊದಲ ಮೂರು ಸೆಟ್‌ಗಳನ್ನು 15–11, 15–13, 15–8ರಿಂದ ಗೆದ್ದು ಗೆಲುವು ಖಚಿತಪಡಿಸಿಕೊಂಡ ಸ್ಪೈಕರ್ಸ್‌ ನಾಲ್ಕನೇ ಸೆಟ್‌ನಲ್ಲಿ 15–10ರಿಂದ ಜಯ ಗಳಿಸಿತು. ಕೊನೆಯ ಸೆಟ್‌ನಲ್ಲಿ ಯು ಮುಂಬಾ 15–5ರಿಂದ ಜಯಿಸಿ ಸಮಾಧಾನಪಟ್ಟುಕೊಂಡಿತು.

ಇಂದಿನ ಪಂದ್ಯ
ಕ್ಯಾಲಿಕಟ್ ಹೀರೋಸ್‌–ಚೆನ್ನೈ ಸ್ಪಾರ್ಟನ್ಸ್‌
ಸಮಯ: ಸಂಜೆ 7.00
ಸ್ಥಳ: ಕೊಚ್ಚಿ
ನೇರ ಪ್ರಸಾರ: ಸೋನಿ ಟೆನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !