ಮಂಗಳವಾರ, ಸೆಪ್ಟೆಂಬರ್ 28, 2021
21 °C

Tokyo Olympics: ಸಿಮೋನ್ ಬೈಲ್ಸ್ ಅನುಪಸ್ಥಿತಿ: ರಷ್ಯಾ ಪಾರಮ್ಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಅಮೆರಿಕದ ‘ಸೂಪರ್ ಸ್ಟಾರ್’ ಸಿಮೋನ್ ಬೈಲ್ಸ್ ಅವರು ಜಿಮ್ನಾಸ್ಟಿಕ್ಸ್ ತಂಡದಿಂದ ಹೊರಗೆ ಉಳಿಯಲು ನಿರ್ಧರಿಸಿದ್ದಾರೆ. ಅನಾರೋಗ್ಯದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಅಮೋಘ ಆರಂಭದೊಂದಿಗೆ ತಂಡಕ್ಕೆ ಪಾಯಿಂಟ್‌ಗಳನ್ನು ಗಳಿಸಿಕೊಟ್ಟಿರುವ ಅವರು ಉಳಿದಿರುವ ಫೈನಲ್‌ ಸ್ಪರ್ಧೆಗಳಿಗೆ ಲಭ್ಯ ಇರುವುದಿಲ್ಲ. ಅವರ ಬದಲಿಗೆ ಜೋರ್ಡಾನ್ ಚೈಲ್ಸ್‌ ಅವರನ್ನು ಅಮೆರಿಕ ಕಣಕ್ಕೆ ಇಳಿಸಿದೆ. 24 ವರ್ಷದ ಸಿಮೋನ್ ಒಲಿಂಪಿಕ್ಸ್‌ನಲ್ಲಿ ಆರನೇ ಚಿನ್ನದ ಗುರಿಯೊಂದಿಗೆ ಬಂದಿದ್ದರು.

ಸಿಮೋನ್ ಅನುಪಸ್ಥಿತಿಯಲ್ಲಿ ಫೈನಲ್‌ನಲ್ಲಿ ಸ್ಪರ್ಧಿಸಿದ ಅಮೆರಿಕಕ್ಕೆ ರಷ್ಯಾ ಮಹಿಳೆಯರು ಆಘಾತ ನೀಡಿ ಚಿನ್ನ ಗೆದ್ದುಕೊಂಡರು. ಬ್ರಿಟನ್‌ ಅಚ್ಚರಿಯ ಫಲಿತಾಂಶದೊಂದಿಗೆ ಕಂಚಿನ ಪದಕ ಗಳಿಸಿತು.

ಆಡಿದ ಒಲಿಂಪಿಕ್‌ ಸಮಿತಿಯ ಹೆಸರಿನಲ್ಲಿ ಸ್ಪರ್ಧಿಸುತ್ತಿರುವ ರಷ್ಯಾ ತಂಡದವರು ಏಂಜೆಲಿನಾ ಮೆಲ್ನಿಕೋವ ಮುಂದಾಳತ್ವದಲ್ಲಿ ಫೈನಲ್ ಹಂತದಲ್ಲಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು