ಸೋಮವಾರ, ಜುಲೈ 4, 2022
24 °C

ಅಥ್ಲೀಟ್ಸ್‌ ಸಮಿತಿಗೆ ಲವ್ಲಿನಾ ಬೊರ್ಗೊಹೈನ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಲಿಂಪಿಯನ್ ಲವ್ಲಿನಾ ಬೊರ್ಗೊಹೈನ್ ಅಥ್ಲೀಟ್ಸ್‌ ಸಮಿತಿಯ ನಿರ್ದೇಶಕರ ಮಂಡಳಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಗುರುವಾರ ತಿಳಿಸಿದೆ.

ಈಚೆಗೆ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್ ಸಂದರ್ಭದಲ್ಲಿ ಚುನಾವಣೆ ನಡೆಯಿತು. ಅದರಲ್ಲಿ ಲವ್ಲಿನಾ ಅತಿ ಹೆಚ್ಚು ಮತಗಳನ್ನು ಗಳಿಸಿದರು.

‘ಈ ಜಯವು ನನಗೆ ಸಂದ ಬಹುದೊಡ್ಡ ಗೌರವ. ಈ ಪ್ರತಿಷ್ಠಿತ ಸಂಸ್ಥೆಯ ಸದಸ್ಯೆಯಾಗುವ ಹಂಬಲವಿತ್ತು. ಆದರೆ, ಅದಕ್ಕಿಂತಲೂ ದೊಡ್ಡ ಸ್ಥಾನ ಲಭಿಸಿದೆ. ಇದರಿಂದಾಗಿ ಭಾರತದಲ್ಲಿ ಬಾಕ್ಸಿಂಗ್‌ಗೆ ಉತ್ತೇಜನ ನೀಡಲು ಸಾಧ್ಯವಾಗಲಿದೆ. ಅದರಲ್ಲೂ ಮಹಿಳೆಯ ಬಾಕ್ಸಿಂಗ್‌ ಬೆಳವಣಿಗೆಗೆ ಕಾರ್ಯನಿರ್ವಹಿಸಲು ನನಗೆ ಅವಕಾಶ ಲಭಿಸಿದೆ’ ಎಂದು ಲವ್ಲಿನಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು