ಗುರುವಾರ , ಜುಲೈ 29, 2021
25 °C

ಅಮೆರಿಕದ ಬಾಕ್ಸರ್‌ ಮಿಕೆಲಾಗೆ ಕೋವಿಡ್‌

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕದ ಬಾಕ್ಸರ್‌ ಮಿಕೆಲಾ ಮೇಯರ್‌ಗೆ ಕೋವಿಡ್‌- 19 ಇರುವುದು ಭಾನುವಾರ ದೃಢಪಟ್ಟಿದೆ.

ಮಿಕೆಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಇದೇ ಮಂಗಳವಾರ ರಾತ್ರಿ ಎಂ.ಜಿ.ಎಂ. ಗ್ರ್ಯಾಂಡ್ ಗಾರ್ಡನ್‌ ಅರೇನಾದಲ್ಲಿ ನಿಗದಿಯಾಗಿದ್ದ ಟಾಪ್‌ ರ‍್ಯಾಂಕ್‌ ಬಾಕ್ಸಿಂಗ್‌ ಪಂದ್ಯದಲ್ಲಿ ಮಿಕೆಲಾ ಅವರು ನೈಜೀರಿಯಾದ ಹೆಲೆನ್‌ ಜೋಸೆಫ್‌ ವಿರುದ್ಧ ಸೆಣಸಬೇಕಿತ್ತು.

29 ವರ್ಷ ವಯಸ್ಸಿನ ಮಿಕೆಲಾ, 2012ರಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ ಲೈಟ್‌ ವೆಲ್ಟರ್‌ವೇಟ್‌ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. 2016ರ ರಿಯೊ ಒಲಿಂಪಿಕ್ಸ್‌ನ ಮಹಿಳೆಯರ 60 ಕೆ.ಜಿ. ಸ್ಪರ್ಧೆಯಲ್ಲಿ ರಿಂಗ್‌ಗೆ ಇಳಿದಿದ್ದ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು. ನಂತರ ಅಮೆಚೂರ್‌ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದರು.

2017ರಲ್ಲಿ ವೃತ್ತಿಪರ ಬಾಕ್ಸಿಂಗ್‌ ಪಯಣ ಶುರು ಮಾಡಿದ್ದ ಮಿಕೆಲಾ, ಇದುವರೆಗೂ ಆಡಿದ 12 ಪಂದ್ಯಗಳಲ್ಲೂ ಗೆದ್ದಿದ್ದರು.

‘ನನ್ನ ತಂಡದ ಎಲ್ಲಾ ಸದಸ್ಯರೂ ಆರೋಗ್ಯವಾಗಿದ್ದಾರೆ. ನನಗೆ ಕೊರೊನಾ ಸೋಂಕು ತಗುಲಿರುವುದು ಖಾತರಿಯಾಗಿದೆ. ಲಾಕ್‌ಡೌನ್‌ ಬಳಿಕ ನಿಗದಿಯಾಗಿದ್ದ ಮೊದಲ ಪಂದ್ಯದಲ್ಲೇ ಮಿಂಚಬೇಕೆಂಬ ಆಸೆಯಿಂದ ಕಠಿಣ ಅಭ್ಯಾಸ ನಡೆಸಿದ್ದೆ. ಕೋವಿಡ್‌ ಕಾರಣ ಈಗ ರಿಂಗ್‌ನಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ತುಂಬಾ ಬೇಸರವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು