ಮಂಗಳವಾರ, ಜೂನ್ 15, 2021
25 °C

ಅಕ್ಟೋಬರ್‌ನಲ್ಲಿ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಸನ್‌: ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ಅಕ್ಟೋಬರ್ 26ರಿಂದ ನವಂಬರ್ 6ರವರೆಗೆ ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಮಂಗಳವಾರ ಈ ವಿಷಯ ತಿಳಿಸಿದೆ.

ಈ ಟೂರ್ನಿಯು ಮೊದಲು ಭಾರತದಲ್ಲಿ ನಿಗದಿಯಾಗಿತ್ತು. ಆದರೆ ಆತಿಥ್ಯದ ಶುಲ್ಕವನ್ನು ಪಾವತಿಸದ ಹಿನ್ನೆಲೆಯಲ್ಲಿ ಆಯೋಜನೆಯ ಹಕ್ಕು ಕಳೆದುಕೊಂಡಿತ್ತು. ಹೀಗಾಗಿ ಸರ್ಬಿಯಾಗೆ ಟೂರ್ನಿಯನ್ನು ನಡೆಸುವ ಅವಕಾಶ ಲಭಿಸಿದೆ.

ಚಾಂಪಿಯನ್‌ಷಿಪ್‌ನ ಸ್ಥಳೀಯ ಆಯೋಜನಾ ಸಮಿತಿಗೆ ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್‌ ವುಕಿಕ್ ಅವರೇ ಮುಖ್ಯಸ್ಥರಾಗಿದ್ದು, ಅವರ ಮೇಲ್ವಿಚಾರಣೆಯಲ್ಲಿ ಟೂರ್ನಿ ನಡೆಯಲಿದೆ.

‘ವಿಶ್ವದಾದ್ಯಂತ ಬಾಕ್ಸರ್‌ಗಳಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ಗಳು ವೇದಿಕೆ ಒದಗಿಸುತ್ತವೆ. ಇದು ನಮ್ಮ ದೃಢತೆಯನ್ನು ತೋರಿಸುತ್ತದೆ‘ ಎಂದು ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್‌ ಹೇಳಿದ್ದಾರೆ.

ಹಿಂದಿನ ಆವೃತ್ತಿಯ ಚಾಂಪಿಯನ್‌ಷಿಪ್‌ 2019ರಲ್ಲಿ ರಷ್ಯಾದ ಏಕಟೆರಿನ್‌ಬರ್ಗ್‌ನಲ್ಲಿ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು