ಕಂಚು ಗೆದ್ದ ಭಾರತ ಪುರುಷರ ಹಾಕಿ ತಂಡ

7

ಕಂಚು ಗೆದ್ದ ಭಾರತ ಪುರುಷರ ಹಾಕಿ ತಂಡ

Published:
Updated:
Deccan Herald

 ಜಕಾರ್ತ: ಸೆಮಿಫೈನಲ್‌ನಲ್ಲಿ ಸೋತು ಟೀಕೆಗೆ ಒಳಗಾಗಿದ್ದ ಭಾರತ ಪುರುಷರ ಹಾಕಿ ತಂಡ ಶನಿವಾರ ಕಂಚು ಗೆದ್ದಿತು. ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಣಯಿಸಲು ನಡೆದ ಪಂದ್ಯದಲ್ಲಿ ಪಿ.ಆರ್.ಶ್ರೀಜೇಶ್‌ ಬಳಗ ಪಾಕಿಸ್ತಾನವನ್ನು 2–1ರಿಂದ ಮಣಿಸಿತು.

ಮೂರನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಭಾರತದ ಖಾತೆ ತೆರೆದರು. ನಂತರ ಉಭಯ ತಂಡಗಳು ಭಾರಿ ಪೈಪೋಟಿ ನಡೆಸಿದವು. ಮುನ್ನಡೆ ಗಳಿಸಲು ಭಾರತ ಪ್ರಯತ್ನ ಮಾಡಿದರೆ ಪಾಕಿಸ್ತಾನ ಸಮಬಲ ಸಾಧಿಸಲು ಸೆಣಸಿತು.

36ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ಮೊಹಮ್ಮದ್ ಅತೀಕ್‌ ಪಾಕಿಸ್ತಾನ ಪಾಳಯದವರು ನಿಟ್ಟುಸಿರು ಬಿಡುವಂತೆ ಮಾಡಿದರು. ಆದರೆ 50ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಹರ್ಮನ್ ಪ್ರೀತ್ ಸಿಂಗ್‌ ಭಾರತ ತಂಡದಲ್ಲಿ ಭರವಸೆ ಮೂಡಿಸಿದರು.

ನಂತರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಭಾರತ ಎದುರಾಳಿಗಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !