ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣಗಳಿಗೆ ಪ್ರೇಕ್ಷಕರು ಹೋಗಬಹುದಾದ ನಿರ್ದಿಷ್ಟ ದಿನಾಂಕ ಹೇಳಲಾಗದು: ರಿಜಿಜು

ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿಕೆ
Last Updated 4 ಸೆಪ್ಟೆಂಬರ್ 2020, 11:21 IST
ಅಕ್ಷರ ಗಾತ್ರ

ನವದೆಹಲಿ: ಕ್ರೀಡಾಂಗಣಗಳ ಪ್ರವೇಶಕ್ಕೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವನಿರ್ದಿಷ್ಟ ದಿನಾಂಕವನ್ನು ಹೇಳಲು ಸಾಧ್ಯವಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಶುಕ್ರವಾರ ಹೇಳಿದ್ದಾರೆ.

ಫುಟ್‌ಬಾಲ್ ದಿಗ್ಗಜ ಭೈಚುಂಗ್‌ ಭುಟಿಯಾ ಅವರು ಫುಟ್‌ಬಾಲ್‌ ಆಟಗಾರರಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡಲು ವಿನ್ಯಾಸಗೊಳಿಸಿದ ‘ಎನ್‌ಜೊಗೊ’ ಆ್ಯಪ್‌ ಬಿಡುಗಡೆಯ ವರ್ಚುವಲ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೆಪ್ಟೆಂಬರ್‌ 21ರಿಂದ ಟೂರ್ನಿಗಳನ್ನು ಆರಂಭಿಸಿ 100 ಮಂದಿಗೆ ಅವಕಾಶ ಕಲ್ಪಿಸಲಾಗುವುದು ಎಂದುಕೇಂದ್ರ ಗೃಹ ಸಚಿವಾಲಯವು ಕೋವಿಡ್‌ ತಡೆ ಅನ್‌ಲಾಕ್‌ 4 ಮಾರ್ಗಸೂಚಿಗಳಲ್ಲಿ ಹೇಳಿತ್ತು.

‘ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ನಿರ್ದಿಷ್ಟ ದಿನಾಂಕವನ್ನು ಹೇಳಲಾಗದು. ಏಕೆಂದರೆ ಮುಂದಿನ 1–2 ತಿಂಗಳು ಕೋವಿಡ್‌–19 ಸೋಂಕು ಹರಡುವ ಪ್ರಮಾಣ ಯಾವ ರೀತಿಯಲ್ಲಿರುತ್ತದೆ ಎಂದು ನನಗೆ ಗೊತ್ತಿಲ್ಲ‘ ಎಂದು ರಿಜಿಜು ಹೇಳಿದರು.

‘ಸಾಧ್ಯವಾದಷ್ಟು ಶೀಘ್ರ ಪ್ರೇಕ್ಷಕರು ಕ್ರೀಡಾಂಗಣಗಳಿಗೆ ಬರಲಿ ಎಂದು ನಾನು ಆಶಿಸುತ್ತೇನೆ. ಆ ವಿಶ್ವಾಸವಿದೆ. ಆದರೂ ಜನರ ಆರೋಗ್ಯ ಸುರಕ್ಷತೆ ಮೊದಲ ಆದ್ಯತೆಯಾಗಿರಲಿದೆ‘ ಎಂದು ಅವರು ನುಡಿದರು.

ಕೇಂದ್ರ ಗೃಹ ಸಚಿವಾಲವು ಆಗಸ್ಟ್‌ 31ರಂದು ಕ್ರೀಡಾ ಚಟುವಟಿಕೆಗಳ ಮೇಲಿದ್ದ ನಿರ್ಬಂಧವನ್ನು ತೆಗೆದುಹಾಕಿದೆ.

ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ನಿರ್ಧಾರವನ್ನು ಸ್ಥಳೀಯ ಆಡಳಿತಗಳು ತೆಗೆದುಕೊಳ್ಳಬೇಕು. ಆದರೆ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಭಾರತ ಬಹುದೊಡ್ಡ ದೇಶವಾಗಿರುವುದರಿಂದ ಪ್ರತಿ ಪ್ರದೇಶಗಳಲ್ಲಿ ಭಿನ್ನ ಪರಿಸ್ಥಿತಿಯಿರುತ್ತದೆ‘ ಎಂದು ರಿಜಿಜು ಹೇಳಿದರು.

’2028ರ ಒಲಿಂಪಿಕ್ಸ್‌ ಪದಕಪಟ್ಟಿಯಲ್ಲಿ ಭಾರತ ಅಗ್ರ 10ರೊಳಗೆ ಸ್ಥಾನ ಗಳಿಸಬೇಕು ಎಂಬ ನನ್ನ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಕ್ರೀಡಾ ವಲಯದ ಒಂದಷ್ಟು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ. ಯೋಜನೆ ಕಾರ್ಯಗತವಾಗಲು ಹೇಗೆ ಸಾಧ್ಯ ಎಂದು ಹಲವರು ಟೀಕಿಸಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರ. ಜನರು ತಮ್ಮದೇ ಆದ ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಎಲ್ಲದಕ್ಕೂ ಪ್ರತಿಕ್ರಿಯಿಸಬೇಕು ಎಂದೇನಿಲ್ಲ‘ ಎಂದು ರಿಜಿಜು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT