ಗುರುವಾರ , ಏಪ್ರಿಲ್ 2, 2020
19 °C
ಹ್ಯಾಟ್ರಿಕ್ ಗೋಲು ಗಳಿಸಿದ ಪ್ರದೀಪ್

ಕೆ.ಎಂ.ಕಾರ್ಯಪ್ಪ ರಾಜ್ಯ ಹಾಕಿ ಟೂರ್ನಿ: ಸೆಮಿಫೈನಲ್‌ಗೆ ಕೆನರಾ ಬ್ಯಾಂಕ್, ಸಾಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆನರಾ ಬ್ಯಾಂಕ್, ಭಾರತ ಕ್ರೀಡಾ ಪ್ರಾಧಿಕಾರ (ಸಾಯ್), ಸದರ್ನ್ ಕಮಾಂಡ್ ಮತ್ತು ಎಂಇಜಿ ತಂಡಗಳು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಾಜ್ಯ ಹಾಕಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದವು.

ಶುಕ್ರವಾರ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನರಾ ಬ್ಯಾಂಕ್ 3–1ರಲ್ಲಿ ಡಿವೈಇಎಸ್‌ ಎದುರು ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಸದರ್ನ್ ಕಮಾಂಡ್ ತಂಡ ಎಎಸ್‌ಸಿ ಸೆಂಟರ್‌ ವಿರುದ್ಧ 3–0ಯಿಂದ ಗೆಲುವು ಸಾಧಿಸಿತು. ಎಂಟರ ಘಟ್ಟದ ಮೂರನೇ ಪಂದ್ಯದಲ್ಲಿ ಎಂಇಜಿ 2–1ರಲ್ಲಿ ರೈಲು ಗಾಲಿ ಕಾರ್ಖಾನೆಯನ್ನು ಮಣಿಸಿತು. ಕೊನೆಯ ಪಂದ್ಯದಲ್ಲಿ ರಾಜ್ಯ ಪೊಲೀಸ್ ತಂಡವನ್ನು ಸಾಯ್ 7–5ರಲ್ಲಿ ಸೋಲಿಸಿತು.

ಮಿಂಚಿದ ನಿಕಿನ್, ಅಪ್ಪಣ್ಣ: ಡಿವೈಇಎಸ್ ಎದುರಿನ ತಂಡದಲ್ಲಿ ನಿಕಿನ್ ತಿಮ್ಮಯ್ಯ ಒಂಬತ್ತನೇ ನಿಮಿಷದಲ್ಲೇ ಕೆನರಾ ಬ್ಯಾಂಕ್‌ಗೆ ಮುನ್ನಡೆ ಗಳಿಸಿಕೊಟ್ಟರು. 25ನೇ ನಿಮಿಷದಲ್ಲಿ ಕೆ.ಎಸ್‌.ಅಪ್ಪಣ್ಣ ಮತ್ತು 41ನೇ ನಿಮಿಷದಲ್ಲಿ ವರ್ಗೀಸ್ ಜಾನ್ ಗಳಿಸಿದ ಗೋಲುಗಳೊಂದಿಗೆ ತಂಡದ ಭರವಸೆ ಹೆಚ್ಚಿತು. ಡಿವೈಇಎಸ್ ಪರ ಏಕೈಕ ಗೋಲು ಗಳಿಸಿದ ಪವನ್ ಮಡಿವಾಳರ (55ನೇ ನಿಮಿಷ) ಸೋಲಿನ ಅಂತರ ಕಡಿಮೆ ಮಾಡಿದರು.

ಎಎಸ್‌ಸಿ ಸೆಂಟರ್ ಎದುರಿನ ಪಂದ್ಯದಲ್ಲಿ ಸದರ್ನ್ ಕಮಾಂಡ್ ಏಕಪಕ್ಷೀಯ ಜಯ ದಾಖಲಿಸಿತು. ಮಣಿ ಸಿಂಗ್ (13ನೇ ನಿ), ಅಜಿತ್ ಶಿಂಧೆ (16ನೇ ನಿ) ಮತ್ತು ಎಂ.ಎಸ್.ಬೋಪಣ್ಣ (54ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು. ಎಂಇಜಿ ವಿರುದ್ಧ ರೈಲು ಗಾಲಿ ಕಾರ್ಖಾನೆ ಆರಂಭಿಕ ಮುನ್ನಡೆ ಸಾಧಿಸಿದರೂ ನಂತರ ಎದುರಾಳಿಗಳ ಆಟ ಕಳೆಕಟ್ಟಿತು. ಸುಶೀಲ್ ಗ್ಸಾಲ್ಸೊ 10ನೇ ನಿಮಿಷದಲ್ಲಿ ಗಾಲಿ ಕಾರ್ಖಾನೆಗಾಗಿ ಗೋಲು ಗಳಿಸಿದ್ದರು. ಆದರೆ 17ನೇ ನಿಮಿಷದಲ್ಲಿ ಎಂಇಜಿಯ ಮಂಜೀತ್ ತಿರುಗೇಟು ನೀಡಿ ಸಮಬಲ ಸಾಧಿಸಿದರು. 58ನೇ ನಿಮಿಷದಲ್ಲಿ ದೀಪಕ್ ಅವರ ಗೋಲು ತಂಡಕ್ಕೆ ಗೆಲುವು ತಂದುಕೊಟ್ಟಿತು.

ಪ್ರದೀಪ್ ಹ್ಯಾಟ್ರಿಕ್‌; ಗೋಲು ಮಳೆ: ಸಾಯ್ ಮತ್ತು ಪೊಲೀಸ್ ತಂಡಗಳ ನಡುವಿನ ಪಂದ್ಯದಲ್ಲಿ ಒಟ್ಟು 12 ಗೋಲುಗಳು ಮೂಡಿಬಂದವು. ಪೊಲೀಸ್ ತಂಡದ ಪ್ರದೀಪ್ ಹ್ಯಾಟ್ರಿಕ್ ಸಾಧಿಸಿದರು. ಸಾಯ್ ಪರ ಬಿ.ಎಂ. ಲಿಖಿತ್ (3ನೇ ನಿ), ಹರೀಶ್ ಮುಟಗಾರ (6, 20ನೇ ನಿ), ವೀರಣ್ಣ ಗೌಡ (27ನೇ ನಿ), ಚೆಲ್ಸಿ ಮೇದಪ್ಪ (40ನೇ ನಿ), ಬಿ.ಪಿ.ಸೋಮಣ್ಣ (51ನೇ ನಿ) ಮತ್ತು ಯತೀಶ್ ಕುಮಾರ್ (54ನೇ ನಿ) ಗೋಲು ಗಳಿಸಿದರೆ ಪೊಲೀಸ್ ತಂಡಕ್ಕಾಗಿ ಎನ್‌.ಬಿ.ಪ್ರದೀಪ್ (8, 16, 18, 39ನೇ ನಿ) ಮತ್ತು ಕೆ.ಎಸ್‌. ಪರಮೇಶ್ (13ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಇಂದಿನ ಪಂದ್ಯಗಳು (ಸೆಮಿಫೈನಲ್)
ಕೆನರಾ ಬ್ಯಾಂಕ್‌–ಸದರ್ನ್ ಕಮಾಂಡ್
ಆರಂಭ: ಮಧ್ಯಾಹ್ನ 2.00

ಎಂಇಜಿ–ಸಾಯ್
ಆರಂಭ: ಸಂಜೆ 4.00

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು