ಭಾನುವಾರ, ಸೆಪ್ಟೆಂಬರ್ 25, 2022
29 °C
ದಸರಾ ವಿಭಾಗ ಮಟ್ಟದ ಕ್ರೀಡಾಕೂಟ: ಪುರುಷರ ವಿಭಾಗದ ಓಟದಲ್ಲಿ ದಕ್ಷಿಣ ಕನ್ನಡದ ಸುಮನ್‌, ಮಹಾಂತೇಶ್‌ ಮಿಂಚು

ದೂರ ಅಂತರ: ಚೈತ್ರಾ ದೇವಾಡಿಗ ಓಟದ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೂರ ಅಂತರ ಓಟದಲ್ಲಿ ಅಮೋಘ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಚೈತ್ರಾ ದೇವಾಡಿಗ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾನುವಾರ ಮಿಂಚಿದರು. ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕೂಟದ ಮಹಿಳೆಯರ 1500 ಮೀಟರ್ಸ್ ಮತ್ತು 3000 ಮೀಟರ್ಸ್ ಓಟದ ಚಿನ್ನದ ಪದಕ ಅವರ ಕೊರಳಿಗೇರಿತು.

1500 ಮೀಟರ್ಸ್ ಓಟದಲ್ಲಿ ದಕ್ಷಿಣ ಕನ್ನಡದವರೇ ಆದ ಚೈತ್ರಾ ಮತ್ತು ಮೈಸೂರಿನ ಸಹನಾ ಅವರ ತೀವ್ರ ಪೈಪೋಟಿ ಮೆಟ್ಟಿನಿಂತ ಚೈತ್ರಾ ದೇವಾಡಿಗ 4 ನಿಮಿಷ 45.7 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 3000 ಮೀಟರ್ಸ್ ಓಟದಲ್ಲಿ ದಕ್ಷಿಣ ಕನ್ನಡದ ಸ್ಪಂದನ ಮತ್ತು ಕೊಡಗಿನ ಪ್ರಗತಿ ಪಿ.ಪಿ ಅವರು ಚೈತ್ರಾ ದೇವಾಡಿಗ ಅವರಿಗೆ ಪೈಪೋಟಿ ಒಡ್ಡಿದರು. ಆದರೆ 10 ನಿಮಿಷ 52.6 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಚೈತ್ರಾ ದೇವಾಡಿಗ ಚಿನ್ನಕ್ಕೆ ಮುತ್ತಿಕ್ಕಿದರು.

ಪುರುಷರ ಓಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮನ್ ಮತ್ತು ಮಹಾಂತೇಶ್ ಮಿಂಚಿದರು. ಸುಮನ್ 100 ಮೀಟರ್ಸ್ ಓಟವನ್ನು 10.9 ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿದರೆ ಮಹಾಂತೇಶ್‌ 400 ಮೀಟರ್ಸ್ ಓಟದ ಗುರಿ ತಲುಪಲು 48.1 ಸೆಕೆಂಡು ತೆಗೆದುಕೊಂಡರು.

ಫಲಿತಾಂಶಗಳು: ಪುರುಷರ 100 ಮೀ: ಸುಮನ್ (ದಕ್ಷಿಣ ಕನ್ನಡ)–1. ಹಷ್ಮಿತ್ (ದ.ಕ)–2, ಪ್ರಜ್ವಲ್ ಆರ್‌ (ಮೈಸೂರು)–3. ಕಾಲ: 10.9 ಸೆ; 200 ಮೀ: ನಿಖಿಲ್ (ಉಡುಪಿ)–1, ಗುರುಪ್ರಸಾದ್ (ಮೈಸೂರು)–2, ರಕ್ಷಿತ್ (ದ.ಕ)–3. ಕಾಲ: 22.4 ಸೆ; 400 ಮೀ: ಮಹಾಂತೇಶ್ (ದ.ಕ)–1, ಗುರುಪ್ರಸಾದ್ (ಮೈಸೂರು)–2, ಶರಣ್ ಶೆಟ್ಟಿ (ದ.ಕ)–3. ಕಾಲ: 48.1 ಸೆ; 800 ಮೀ: ಮಿಲನ್ (ದ.ಕ)–1, ವಿಖ್ಯಾತ್ (ಉಡುಪಿ)–2, ಸಂಜಯ್ ಕುಮಾರ್ (ದ.ಕ)–3, ಕಾಲ: 2 ನಿ 6 ಸೆ; 1500 ಮೀ: ರಾಹುಲ್ (ಮೈಸೂರು)–1, ಲಾರ (ದ.ಕ)–2, ಪ್ರಣೀತ್‌ (ಹಾಸನ)–3. ಕಾಲ: 4 ನಿ 15.5 ಸೆ, 5000 ಮೀ: ಮಣಿಕಂಠ (ಚಾಮರಾಜನಗರ)–1, ಲಕ್ಷ್ಮೇಶ್‌ (ಮೈಸೂರು)–2, ಯಶವಂತ (ದ.ಕ)–3. ಕಾಲ: 16 ನಿ 29.4 ಸೆ; 110 ಮೀ ಹರ್ಡಲ್ಸ್‌: ಸುಶಾಂತ್ (ಉಡುಪಿ)–1, ದಿಶಾಂತ್ (ದ.ಕ)–2, ಮಹಮ್ಮದ್–3. ಕಾಲ: 15.3 ಸೆ; ಲಾಂಗ್ ಜಂಪ್‌: ಸುಮಂತ್‌ (ದ.ಕ)–1, ದರ್ಶನ್‌ (ದ.ಕ)–2, ಅನುಷ್ (ಚಿಕ್ಕಮಗಳೂರು)–3. ದೂರ: 8.86 ಮೀ; ಹೈಜಂಪ್‌: ಅನಿಲ್ ಕುಮಾರ್ (ದ.ಕ)–1, ರವಿ (ಹಾಸನ)–2, ಸುದೀಪ್ (ದ.ಕ)–3. ಎತ್ತರ: 1.89 ಮೀ: ಜಾವೆಲಿನ್‌ ಥ್ರೋ: ಕೀರ್ತಿರಾಜ್ (ದ.ಕ)–1, ದಾನಿಕ್ ಪ್ರದೀಪ್‌ (ಹಾಸನ)–2, ಹರ್ಷವರ್ಧನ್‌ (ಚಾಮರಾಜನಗರ)–3. ಅಂತರ: 56.20 ಮೀ.

ಮಹಿಳೆಯರ 100 ಮೀ: ನವಮಿ ಎಚ್‌.ಆರ್‌ (ಮೈಸೂರು)–1, ಹರ್ಷಿಣಿ ಆರ್ (ಮೈಸೂರು)–2, ಐಶ್ವರ್ಯಾ (ದ.ಕ)–3. ಕಾಲ: 12.1 ಸೆ; 200 ಮೀ: ನವಮಿ ಎಚ್‌.ಆರ್‌ (ಮೈಸೂರು)–1, ಐಶ್ವರ್ಯಾ (ದ.ಕ)–2, ಶ್ರದ್ಧಾ (ಉಡುಪಿ)–3. ಕಾಲ: 25.2 ಸೆ; 400 ಮೀ: ದೀಪಶ್ರೀ (ದ.ಕ)–1, ಐಶ್ವರ್ಯಾ (ದ.ಕ)–2, ರಿತೀಶ (ಉಡುಪಿ)–3. ಕಾಲ: 1 ನಿ; 800 ಮೀ: ಚೈತ್ರಾ (ದ.ಕ)–1, ಸಹನಾ (ಮೈಸೂರು)–2, ದೀಪಶ್ರೀ (ದ.ಕ)–3. ಕಾಲ: 2 ನಿ 16.7 ಸೆ, 1500 ಮೀ: ಚೈತ್ರಾ ದೇವಾಡಿಗ (ದ.ಕ)–1, ಚೈತ್ರಾ ಪಿ (ದ.ಕ)–2, ಸಹನಾ (ಮೈಸೂರು)–3. ಕಾಲ: 4 ನಿ 45.7 ಸೆ; 3000 ಮೀ: ಚೈತ್ರಾ ದೇವಾಡಿಗ (ದ.ಕ)–1, ಸ್ಪಂದನ (ದ.ಕ)–2, ಪ್ರಗತಿ (ಕೊಡಗು)–3. ಕಾಲ: 10 ನಿ 52.6 ಸೆ; 100 ಮೀ ಹರ್ಡಲ್ಸ್‌: ಪ್ರತೀಕಾ (ಉಡುಪಿ)–1, ಸಿಂಧು (ದ.ಕ)–2, ಚಂದ್ರಿಕಾ (ಉಡುಪಿ)–3. ಕಾಲ: 15.6 ಸೆ; ಲಾಂಗ್ ಜಂಪ್‌: ದೇವಿಕಾ (ದ.ಕ)–1, ಸಿಂಚನಾ (ದ.ಕ)–2, ಚಂದ್ರಿಕಾ (ಉಡುಪಿ)–3. ದೂರ: 5.89 ಮೀ; ಹೈಜಂಪ್‌: ಸಿಂಚನ (ದ.ಕ)–1, ಪಲ್ಲವಿ ಪಾಟೀಲ (ದ.ಕ)–2, ರಶ್ಮಿ (ಉಡುಪಿ)–3. ಎತ್ತರ: 1.67 ಮೀ; ಜಾವೆಲಿನ್ ಥ್ರೋ: ಕರೀಷ್ಮಾ (ಉಡುಪಿ)–1, ಪಾರ್ವತಿ (ದ.ಕ)–2, ಶಾರದಮ್ಮ (ಮಂಡ್ಯ)–3. ಅಂತರ: 36.22 ಮೀ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು