ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರ್ವೆ ಚೆಸ್‌ ಟೂರ್ನಿ: ಆನಂದ್‌ ಗೆಲುವಿನ ಓಟಕ್ಕೆ ತಡೆ

Last Updated 4 ಜೂನ್ 2022, 10:35 IST
ಅಕ್ಷರ ಗಾತ್ರ

ಸ್ಟಾವೆಂಜರ್‌, ನಾರ್ವೆ (ಪಿಟಿಐ): ವಿಶ್ವನಾಥನ್‌ ಆನಂದ್‌ ಅವರು ನಾರ್ವೆ ಚೆಸ್‌ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದರು. ಶನಿವಾರ ನಡೆದ ನಾಲ್ಕನೇ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌, ಅರ್ಮೇನಿಯದ ವೆಸ್ಲಿ ಸೊ ಎದುರು ಪರಾಭವಗೊಂಡರು.

ಸೋತರೂ ಆನಂದ್‌ ಅಗ್ರಸ್ಥಾನಕ್ಕೆ ಧಕ್ಕೆ ಉಂಟಾಗಿಲ್ಲ. ಒಟ್ಟು 8.5 ಅಂಕಗಳೊಂದಿಗೆ ಅವರು ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್ ಜತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆನಂದ್‌ ಮತ್ತು ಸೊ ನಡುವಿನ ಕ್ಲಾಸಿಕಲ್‌ ಪಂದ್ಯ 28 ನಡೆಗಳ ಬಳಿಕ ಡ್ರಾದಲ್ಲಿ ಕೊನೆಗೊಂಡಿತು. ವಿಜೇತರನ್ನು ನಿರ್ಣಯಿಸಲು ನಡೆದ ಆರ್ಮಗೆಡನ್ (ಸಡನ್‌ ಡೆತ್‌) ಗೇಮ್‌ನಲ್ಲಿ ಭಾರತದ ಸ್ಪರ್ಧಿ 46 ನಡೆಗಳಲ್ಲಿ ಜಯ ಸಾಧಿಸಿದರು.

ಆನಂದ್‌ ಮೊದಲ ಮೂರು ಸುತ್ತುಗಳಲ್ಲಿ ಕ್ರಮವಾಗಿ ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಶಿರ್‌ ಲಗ್ರಾವ್, ಬಲ್ಗೇರಿಯದ ವ್ಯಾಸೆಲಿನ್ ಟೊಪಾಲೋವ್ ಮತ್ತು ಚೀನಾದ ಹವೊ ವಾಂಗ್‌ ಅವರನ್ನು ಮಣಿಸಿದ್ದರು.

ಕಾರ್ಲ್‌ಸನ್‌ ನಾಲ್ಕನೇ ಸುತ್ತಿನಲ್ಲಿ ನೆದರ್ಲೆಂಡ್ಸ್‌ನ ಅನೀಶ್‌ ಗಿರಿ ಅವರನ್ನು ಸೋಲಿಸಿ, ಮೂರು ಪಾಯಿಂಟ್ಸ್ ಕಲೆಹಾಕಿ ಜಂಟಿ ಅಗ್ರಸ್ಥಾನಕ್ಕೇರಿದರು. ಅಜರ್‌ಬೈಜಾನ್‌ನ ಶಕ್ರಿಯಾರ್ ಮಮೆದ್ಯರೋವ್, ಹವೊ ವಾಂಗ್‌ ವಿರುದ್ಧ; ಟೊಪಲೊವ್‌, ಲಗ್ರಾವ್‌ ವಿರುದ್ಧ ಗೆಲುವು ಸಾಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT