ಮಂಗಳವಾರ, ಫೆಬ್ರವರಿ 7, 2023
27 °C

ಚೆಸ್‌: ಕಾರ್ಲ್‌ಸನ್‌ಗೆ ಮಣಿದ ಪ್ರಗ್ನಾನಂದ

ಪಿಟಿಐ Updated:

ಅಕ್ಷರ ಗಾತ್ರ : | |

ಸ್ಯಾನ್‌ ಫ್ರಾನ್ಸಿಸ್ಕೊ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಗ್ನಾನಂದ ಅವರು ಮೆಲ್ಟ್‌ವಾಟರ್‌ ಚಾಂಪಿಯನ್ಸ್‌ ಟೂರ್‌ ಫೈನಲ್ಸ್ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರ ರ್‍ಯಾಂಕ್‌ನ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಎದುರು ಸೋತರು. ಅರ್ಜುನ್‌ ಎರಿಗೈಸಿ, ವಿಯೆಟ್ನಾಂನ ಕುವಾಂಗ್ ಲಿಯೆಮ್ ಲಿ ವಿರುದ್ಧ ಗೆದ್ದರು.

ಪ್ರಗ್ನಾನಂದ ಅವರನ್ನು 2.5–0.5 ಪಾಯಿಂಟ್ಸ್‌ನಿಂದ ಮಣಿಸಿದ ನಾರ್ವೆಯ ಕಾರ್ಲ್‌ಸನ್‌, ಇನ್ನೂ ಒಂದು ಸುತ್ತಿನ ಆಟ ಇರುವಂತೆಯೇ ಪ್ರಶಸ್ತಿ ಖಚಿತಪಡಿಸಿಕೊಂಡರು. ಒಟ್ಟು 17 ಪಾಯಿಂಟ್ಸ್‌ ಹೊಂದಿರುವ ಅವರು ಇತರ ಸ್ಪರ್ಧಿಗಳಿಗಿಂತ ಐದು ಪಾಯಿಂಟ್ಸ್‌ ಮುನ್ನಡೆಯಲ್ಲಿದ್ದಾರೆ.

ಪ್ರಗ್ನಾನಂದ ವಿರುದ್ಧದ ಮೊದಲ ಗೇಮ್‌ಅನ್ನು 55 ನಡೆಗಳಲ್ಲಿ ಗೆದ್ದ ಕಾರ್ಲ್‌ಸನ್‌, ಎರಡನೇ ಗೇಮ್‌ನಲ್ಲೂ ಪ್ರಾಬಲ್ಯ ಮೆರೆದು 74 ನಡೆಗಳಲ್ಲಿ ಜಯಿಸಿದರು. ಮೂರನೇ ಗೇಮ್‌ಅನ್ನು ಡ್ರಾ ಮಾಡಿಕೊಂಡು ಪೂರ್ಣ ಪಾಯಿಂಟ್ಸ್‌ ಕಲೆಹಾಕಿದರು.

ಎರಿಗೈಸಿ ಅವರು ತಮ್ಮ ಎದುರಾಳಿಯನ್ನು 2.5–0.5 ಪಾಯಿಂಟ್ಸ್‌ಗಳಿಂದ ಮಣಿಸಿ, ನಾಲ್ಕನೇ ಸ್ಥಾನಕ್ಕೇರಿದರು.  ಮೊದಲ ಎರಡು ಗೇಮ್‌ಗಳನ್ನು ಕ್ರಮವಾಗಿ 66 ಹಾಗೂ 46 ಗೇಮ್‌ಗಳನ್ನು ಗೆದ್ದುಕೊಂಡ ಅವರು, ಮೂರನೇ ಗೇಮ್‌ಅನ್ನು 24 ನಡೆಗಳ ಬಳಿಕ ಡ್ರಾ ಮಾಡಿಕೊಂಡರು. 

ಸೋಮವಾರ ನಡೆಯಲಿರುವ ಕೊನೆಯ ಸುತ್ತಿನಲ್ಲಿ ಎರಿಗೈಸಿ ಮತ್ತು ಪ್ರಗ್ನಾನಂದ ಎದುರಾಗಲಿದ್ದಾರೆ.

ಅಮೆರಿಕದ ವೆಸ್ಲಿ ಸೊ 3–0 ರಲ್ಲಿ ಪೋಲೆಂಡ್‌ನ ಜಾನ್‌ ಕ್ರಿಸ್ಟೋಫ್‌ ದುಡಾ ಅವರನ್ನು ಮಣಿಸಿ ಒಟ್ಟು 12 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿದರು. ಎರಿಗೈಸಿ ಒಂಬತ್ತು ಪಾಯಿಂಟ್ಸ್‌ ಹೊಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು