ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಚೆಸ್‌ ಚಾಂಪಿಯನ್‌ ಅನ್ನು ಎರಡನೇ ಬಾರಿ ಮಣಿಸಿದ ಪ್ರಜ್ಞಾನಂದ

Last Updated 21 ಮೇ 2022, 17:41 IST
ಅಕ್ಷರ ಗಾತ್ರ

ಚೆನ್ನೈ: ಶುಕ್ರವಾರ ನಡೆದ 'ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್' ಆನ್‌ಲೈನ್‌ ಪಂದ್ಯದ ಐದನೇ ಸುತ್ತಿನಲ್ಲಿ ಭಾರತದ 16 ವರ್ಷದ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ ಬಾಬು ಪ್ರಜ್ಞಾನಂದ ಅವರು ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿದರು.

2022 ರಲ್ಲಿ ನಾರ್ವೆಯ ಕಾರ್ಲ್‌ಸೆನ್ ವಿರುದ್ಧ ಪ್ರಜ್ಞಾನಂದ ಅವರು ಸಾಧಿಸಿದ ಎರಡನೇ ವಿಜಯ ಇದಾಗಿದೆ.

ಇದಕ್ಕೂ ಮೊದಲು ಪ್ರಜ್ಞಾನಂದ ಅವರು ಫೆಬ್ರವರಿಯಲ್ಲಿ ‘ಏರ್‌ಥಿಂಗ್ಸ್ ಮಾಸ್ಟರ್ಸ್‌’ನ ಎಂಟನೇ ಸುತ್ತಿನಲ್ಲಿ ಇದೇ ಕಾರ್ಲ್‌ಸೆನ್ ಅವರನ್ನು ಸೋಲಿಸಿದ್ದರು.

ಈ ವಾರ ಶಾಲಾ ಪರೀಕ್ಷೆಗಳು ನಡೆಯುತ್ತಿರುವುದಾಗಿ ಪ್ರಜ್ಞಾನಂದ ಇತ್ತೀಚೆಗೆ ಹೇಳಿದ್ದರು. ಹಾಗಿದ್ದರೂ, ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಹೇಳಿದ್ದರು. ಅದರಂತೆ ಅವರು ಪಂದ್ಯದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ.

ಈ ಪಂದ್ಯದಲ್ಲಿ ತುರುಸಿನ ಹೋರಾಟ ಕಂಡುಬಂದಿತು. ಕೊನೆಯ ಹಂತದವರೆಗೂ ಇಬ್ಬರೂ ಸಮಬಲ ಸಾಧಿಸಿದ್ದರು. ಆದರೆ 40ನೇ ನಡೆಯಲ್ಲಿತಪ್ಪು ಮಾಡಿದ ಕಾರ್ಲಸನ್ ಸೋತರು. ಟೂರ್ನಿಯಲ್ಲಿ ಪ್ರಜ್ಞಾನಂದ ಒಟ್ಟು 12 ಅಂಕ ಕಲೆಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT