ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣ ಕಡೂರು–ನಿಖಿಲ್‌ ಜೋಡಿ ಪ್ರಥಮ

ಚಿಕ್ಕಮಗಳೂರು: ಕಾಫಿಡೇ ಐಎನ್‌ಆರ್‌ಸಿ ರ‍್ಯಾಲಿ
Last Updated 2 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬೆಂಗಳೂರಿನ ಕರ್ಣ ಕಡೂರು ಮತ್ತು ಸಹಚಾಲಕ ನಿಖಿಲ್‌ ವಿಠ್ಠಲ್‌ ಪೈ ಜೋಡಿಯು ಕಾಫಿ ಡೇ ಐಎನ್‌ಆರ್‌ಸಿ ರ‍್ಯಾಲಿಯ ನಾಲ್ಕನೇ ಹಂತದಲ್ಲಿ ಪ್ರಥಮ ಸ್ಥಾನ ಗಳಿಸಿತು.

ಕಾಫಿ ಡೇ ಪ್ರಾಯೋಜಕತ್ವದಲ್ಲಿ ಚಿಕ್ಕಮಗಳೂರು ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಇಂಡಿಯನ್‌ ನ್ಯಾಷನಲ್‌ ರ‍್ಯಾಲಿ ಚಾಂಪಿಯನ್‌ (ಐಎನ್‌ಆರ್‌ಸಿ) ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕರ್ಣ ಕಡೂರು ಹ್ಯಾಟ್ರಿಕ್‌ ಸಾಧಿಸಿದರು. 2016, 2017ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದಿದ್ದ ಐಎನ್‌ಆರ್‌ಸಿಯಲ್ಲಿ ಕರ್ಣ ಪ್ರಥಮ ಸ್ಥಾನ ಪಡೆದಿದ್ದರು.

ಕರ್ಣ ಮತ್ತು ನಿಖಿಲ್‌ ಜೋಡಿಯು ರ‍್ಯಾಲಿಯ 351.77 ಕಿಲೋ ಮೀಟರ್‌ ಮಾರ್ಗವನ್ನು 2 ಗಂಟೆ 19 ನಿಮಿಷ 59.9 ಸೆಕೆಂಡುಗಳಲ್ಲಿ ಪೊಲೊ ಕಾರಿನಲ್ಲಿ ಕ್ರಮಿಸಿ, ಸಾಧನೆ ಮೆರೆದರು.

ಮಹೀಂದ್ರಾ ಅಡ್ವೆಂಚರ್‌ ತಂಡದ ಕೋಲ್ಕತ್ತದ ಅಮಿತ್‌ ರಾಜಿತ್‌ ಘೋಷ್‌ ಮತ್ತು ಸಹಚಾಲಕ ಮಂಗಳೂರಿನ ಅಶ್ವಿನ್‌ ನಾಯಕ್‌ ಜೋಡಿ ದ್ವಿತೀಯ ಸ್ಥಾನ ಪಡೆಯಿತು. ಈ ಜೋಡಿಯು ಎಕ್ಸ್‌ಯುವಿ 500 ಕಾರಿನಲ್ಲಿ 2 ಗಂಟೆ 22 ನಿಮಿಷ 15.3 ಸೆಕೆಂಡುಗಳಲ್ಲಿ ಕ್ರಮಿಸಿತು.

ಚಾಂಪಿಯನ್ಸ್‌ ತಂಡದ ಚಾಲಕ ಕೊಡಗಿನ ಬೋಪಯ್ಯ –ಗಗನ್‌ ಕರುಂಬಯ್ಯ ಜೋಡಿ ತೃತೀಯ ಸ್ಥಾನ ಪಡೆದರು. ಈ ಜೋಡಿಯು 2 ಗಂಟೆ 22 ನಿಮಿಷ 18.8 ಸೆಕೆಂಡ್‌ಗಳಲ್ಲಿ ತಲುಪಿತು.

ಚಂದ್ರಾಪುರ, ಕಮ್ಮರಗೋಡು ಚಟ್ನಹಳ್ಳಿ, ಕಾಫಿ ತೋಟದ ಅಂಕುಡೊಂಕಿನ ಮಾರ್ಗದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನದವರೆಗೆ ಅಂತಿಮ ಹಂತದ ಸ್ಪರ್ಧೆಗಳು ನಡೆದವು. ಕಾಫಿ ತೋಟಗಳ ತಗ್ಗುದಿಣ್ಣೆ, ದುರ್ಗಮ ಹಾದಿಯಲ್ಲಿ ಮೂರು ದಿನ ಕಾರುಗಳ ಸಪ್ಪಳ ರ‍್ಯಾಲಿ ಪ್ರಿಯರಿಗೆ ರಂಜನೆ ನೀಡಿತು. ರ‍್ಯಾಲಿ ಐದನೇ ಹಂತ ಕೇರಳದಲ್ಲಿ ನಡೆಯಲಿದೆ.

ಫಲಿತಾಂಶ: ಐಎನ್‌ಆರ್‌ಸಿ: ಕರ್ಣ ಕಡೂರು–ನಿಖಿಲ್‌ ವಿಠ್ಠಲ್‌ ಪೈ – ಪ್ರಥಮ (2 ಗಂಟೆ 19 ನಿಮಿಷ 59.9 ಸೆಕೆಂಡು), ಬೋಪಯ್ಯ –ಗಗನ್‌ ಕುರುಂಬಯ್ಯ– ದ್ವಿತೀಯ (2 ಗಂಟೆ 22 ನಿಮಿಷ 15.3 ಸೆಕೆಂಡು) ಹಾಗೂ ಅಮಿತ್‌ರಾಜಿತ್‌ ಘೋಷ್‌– ಅಶ್ವಿನ್‌ ನಾಯಕ್ – ತೃತೀಯ (2 ಗಂಟೆ 22 ನಿಮಿಷ 18.8 ಸೆಕೆಂಡು). ಐಎನ್ಆರ್‌ಸಿ–1: ಅಮಿತ್‌ರಾಜಿತ್‌ ಘೋಷ್‌– ಅಶ್ವಿನ್‌ ನಾಯಕ್ –ಪ್ರಥಮ, ಗೌರವ್‌ ಗಿಲ್‌– ಮೂಸಾ ಷರೀಫ್‌– ದ್ವಿತೀಯ (2 ಗಂಟೆ 23 ನಿಮಿಷ 49.2 ಸೆಕೆಂಡು), ಮಿಚು ಗಣಪತಿ– ವೇಣು ರಮೇಶ್‌ಕುಮಾರ್‌– ತೃತೀಯ (2 ಗಂಟೆ 27 ನಿಮಿಷ 18.1 ಸೆಕೆಂಡು)

ಐಎನ್ಆರ್‌ಸಿ–2: ಕರ್ಣ ಕಡೂರು–ನಿಖಿಲ್‌ ವಿಠ್ಠಲ್‌ ಪೈ – ಪ್ರಥಮ, ಬೋಪಯ್ಯ –ಗಗನ್‌ ಕುರುಂಬಯ್ಯ– ದ್ವಿತೀಯ, ಯೂನಸ್‌ ಇಲ್ಯಾಸ್‌– ಕೆ.ಎನ್‌.ಹರೀಶ್‌– ತೃತೀಯ (2 ಗಂಟೆ 22 ನಿಮಿಷ 34.7 ಸೆಕೆಂಡು)
ಐಎನ್ಆರ್‌ಸಿ–3: ಅರ್ಜುನ್‌ ರಾವ್‌– ಮಿಲೆನ್‌ ಜಾರ್ಜ್‌– ಪ್ರಥಮ (2 ಗಂಟೆ 24 ನಿಮಿಷ 29.4 ಸೆಕೆಂಡು), ಫಬಿದ್‌ ಅಹ್ಮರ್‌–ಶಾಹಿದ್‌ ಸಲ್ಮಾನ್‌– ದ್ವಿತೀಯ (2 ಗಂಟೆ 26 ನಿಮಿಷ 34.7 ಸೆಕೆಂಡು), ಅರೂರ್‌ ವಿಕ್ರಂ ರಾವ್‌– ಸೋಮಯ್ಯ– ತೃತೀಯ ((2 ಗಂಟೆ 27 ನಿಮಿಷ 57.4 ಸೆಕೆಂಡು)ಎಫ್‌ಎಂಎಸ್‌ಸಿಐ 2ಡಬ್ಲುಡಿ: ವಿಕ್ರಂಗೌಡ– ಬಿ.ಜಿ.ಸುಧುಂದ್ರ– ಪ್ರಥಮ (2 ಗಂಟೆ 31 ನಿಮಿಷ 51.6 ಸೆಕೆಂಡು), ಪ್ರಖ್ಯಾತ್‌ ಎಚ್‌.ಶಿರೊಳೆ– ಎಸ್‌.ಎಂ.ಭರತ್‌– ದ್ವಿತೀಯ (2 ಗಂಟೆ 32 ನಿಮಿಷ 53 ಸೆಕೆಂಡು), ಮನೋಜ್‌ ಮೋಹನ್‌– ಸೊಬ್‌ ಜಾರ್ಜ್‌–ತೃತೀಯ (2 ಗಂಟೆ 35 ನಿಮಿಷ 32.7 ಸೆಕೆಂಡು)

ಎಫ್‌ಎಂಎಸ್‌ಸಿಐ 4ಡಬ್ಲುಡಿ: ಸಂಜಯ್‌ ಅಗರವಾಲ್‌– ಎಂ.ಸ್ಮಿತಾ ಪ್ರಸಾದ್‌– ಪ್ರಥಮ (2 ಗಂಟೆ 31 ನಿಮಿಷ 2ಸೆಕೆಂಡು), ಸಚಿನ್‌ ಮೂರ್ತಿ–ಸತ್ಯಪಾಲ್‌–ದ್ವಿತೀಯ (2 ಗಂಟೆ 35 ನಿಮಿಷ), ಅವಿನ್‌ ನಂಜಪ್ಪ–ಎಂ.ಸೂರಜ್‌–ತೃತೀಯ (2 ಗಂಟೆ 39 ನಿಮಿಷ 26.5 ಸೆಕೆಂಡು)

******

ಕಾಫಿತೋಟಗಳ ಹಾದಿಯಲ್ಲಿ ಕಾರು ಚಾಲನೆ ಸವಾಲು. ಹ್ಯಾಟ್ರಿಕ್‌ ಸಾಧನೆ ಮಾಡಿದ್ದಕ್ಕೆ ಸಂತಸವಾಗಿದೆ. ಅಂತರರಾಷ್ಟ್ರೀಯ ಮಟ್ಟದ ರ‍್ಯಾಲಿಗಳಲ್ಲಿ ಸಾಧನೆ ಮಾಡುವ ಗುರಿ ಇದೆ.

– ಕರ್ಣ ಕಡೂರು, ಅರ್ಕ ಮೋಟಾರ್ಸ್‌ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT