ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಭೀತಿ: ಚೆಸ್ ತರಬೇತಿಗೆ ಆನ್‌ಲೈನ್‌ ಶಿಬಿರ

ತಂತ್ರಜ್ಞಾನದ ಮೊರೆ ಹೋದ ಸಂಸ್ಥೆಗಳು
Last Updated 20 ಮಾರ್ಚ್ 2020, 4:24 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಆತಂಕದಿಂದ ಬಹುತೇಕ ಎಲ್ಲ ಕಡೆ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿದೆ. ಆದರೆ ಚೆಸ್‌ ಬೇಸಿಗೆ ಶಿಬಿರಗಳು ನಿರಾಳವಾಗಿ ನಡೆಯುತ್ತಿವೆ. ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡಿರುವ ಚೆಸ್ ಸಂಸ್ಥೆಗಳು ಆನ್‌ಲೈನ್ ಮೂಲಕ ತರ ಬೇತಿ ನೀಡಲು ಸಜ್ಜಾಗಿವೆ. ಕೆಲವು ಕಡೆಗಳಲ್ಲಿ ‘ಶಿಬಿರ’ಗಳು ಈಗಾಗಲೇ ಆರಂಭಗೊಂಡಿವೆ.

ಮೈದಾನಕ್ಕೆ ಇಳಿಯುವ ಹಂಗಿಲ್ಲದ ಚೆಸ್ ಬೌದ್ಧಿಕ ಕ್ರೀಡೆ. ಹೆಸರಾಂತ ಕೋಚ್‌ ಗಳಿಂದ ಚೆಸ್ ಆಟಗಾರರು ಆನ್‌ಲೈನ್‌ ತರಬೇತಿ ಪಡೆಯುವ ಪರಿಪಾಠ ಹಲವು ವರ್ಷಗಳಿಂದ ನಡೆಯುತ್ತಿದೆ. ಬೇಸಿಗೆ ರಜೆಯಲ್ಲಿ ಪ್ರಮುಖ ನಗರಗಳಲ್ಲಿ ಚೆಸ್ ತರಬೇತಿ ಶಿಬಿರಗಳು ನಡೆಯುವುದು ಸಾಮಾನ್ಯ. ಈ ವರ್ಷ ಶಿಬಿರಗಳಿಗೆ ಸಿದ್ಧತೆ ನಡೆಸುತ್ತಿರುವಾಗಲೇ ಕೊರೊನಾ ದಾಳಿ ಇಟ್ಟಿತ್ತು. ಹೀಗಾಗಿ ಶಿಬಿರಗಳನ್ನು ಕೈಬಿಡುವ ಪರಿಸ್ಥಿತಿ ಎದುರಾಗಿತ್ತು. ಇಂಥ ಸಂದರ್ಭದಲ್ಲಿ ಹೊಳೆದದ್ದು ಆನ್ ಲೈನ್ ಶಿಬಿರಗಳ ಆಲೋಚನೆ.

ಮನೆಯಿಂದ ಹೊರಗೆ ಹೋಗಬೇಕಾದ ಅಗತ್ಯವೂ ಇಲ್ಲ; ತರಬೇತಿಯೊಂದಿಗೆ ‘ರಜಾ ದಿನಗಳ’ ಸದುಪಯೋಗವೂ ಆಗು ತ್ತದೆ ಎಂಬ ಕಾರಣಕ್ಕೆ ಮಕ್ಕಳ ಪಾಲಕರೂ ಆನ್‌ ಲೈನ್‌ ಕೋಚಿಂಗ್‌ಗೆ ಒಪ್ಪಿಕೊಂ ಡಿದ್ದು ಬಹುತೇಕ ಎಲ್ಲ ಸಂಸ್ಥೆ ಗಳಲ್ಲೂ ಈಗಾಗಲೇ ಸಾಕಷ್ಟು ಮಂದಿ ಹೆಸರು ನೋಂದಾಯಿ
ಸಿಕೊಂಡಿದ್ದಾರೆ.

ತರಬೇತಿ ಹೇಗೆ: ವಿಡಿಯೊ ಮತ್ತು ಆಡಿಯೊ ಶೇರಿಂಗ್/ ಚಾಟಿಂಗ್/ ಕಾನ್ಫರೆನ್ಸ್ ಸೌಲಭ್ಯವಿರುವ ಸ್ಕೈಪ್, ಜೂಮ್, ಚೆಸ್ ಬೇಸ್ ಮತ್ತಿತರ ಸಾಫ್ಟ್‌ವೇರ್‌ಗಳ ಮೂಲಕ ತರಬೇತಿ ನೀಡಲಾಗುತ್ತದೆ. ಕಂಪ್ಯೂಟರ್ ಪರದೆಯಲ್ಲಿ ತೆರೆದುಕೊಳ್ಳುವ ಚೆಸ್ ಬೋರ್ಡ್ ಮೇಲೆ ಕೈ (ಕಾಯಿ) ನಡೆಸುತ್ತ ತರಬೇತುದಾರ ವಿಡಿಯೊ ಚಾಟಿಂಗ್ ಮೂಲಕ ಹೇಳುವ ಮಾಹಿತಿಗಳನ್ನು ಅನುಸರಿಸಿ ಕಲಿಯಲಾಗುತ್ತದೆ. ಸಾಫ್ಟ್‌ ವೇರ್ ಸಾಮರ್ಥ್ಯಕ್ಕೆ ಅನುಗುಣವಾಗಿ ತರಬೇತಿ ವಿಧಾನ ಬದಲಾಗುತ್ತದೆ.

ಇದಕ್ಕೆ ಬೇಕಾಗಿರುವುದು ಗುಣಮಟ್ಟದ ಕಂಪ್ಯೂಟರ್ ಮತ್ತು ಅತಿವೇಗದ ನೆಟ್ ಸೌಲಭ್ಯ.

‘ಸಾಫ್ಟ್‌ವೇರ್‌ನಲ್ಲಿರುವ ಗ್ರೂಪ್ ಚಾಟ್ ಸೌಲಭ್ಯ ಬಳಸಿ ತಲಾ ಮೂರು ಮಂದಿಯ ಗುಂಪು ಮಾಡಿ ತರಬೇತಿ ನೀಡುತ್ತಿದ್ದೇನೆ. ಕಲಿಕೆಯ ನಿರ್ದಿಷ್ಟ ಹಂತದವರನ್ನೆಲ್ಲ ಆಯಾ ಗುಂಪಿನಲ್ಲಿ ಸೇರಿಸಲಾಗಿದೆ. ಇದರಿಂದ ಪುನರಾ ವರ್ತನೆಯ ಸಮಸ್ಯೆ ತಪ್ಪುತ್ತಿದೆ’ ಎಂದು ಮೂರು ದಿನಗಳ ಹಿಂದೆ ತರಬೇತಿ ಆರಂಭಿಸಿರುವ ಹುಬ್ಬಳ್ಳಿ ಚೆಸ್ ಅಕಾಡೆಮಿಯ ಶ್ರೀಪಾದ್ ಕೆ.ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರಿನ ಚಾಂಪಿಯನ್ಸ್ ಚೆಸ್ ಅಕಾಡೆಮಿ ಏಪ್ರಿಲ್ ಮೊದಲ ವಾರದಲ್ಲಿ ತರಬೇತಿ ಆರಂಭಿಸಲು ಯೋಜನೆ ಹಾಕಿಕೊಂಡಿತ್ತು. ಪಾಲಕರ ಒತ್ತಾಯದ ಮೇರೆಗೆ ಮೊದಲೇ ಶುರುಮಾಡಿದ್ದು 20ಕ್ಕೂ ಹೆಚ್ಚು ಮಂದಿ ಆನ್‌ಲೈನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT