ಗುರುವಾರ , ಫೆಬ್ರವರಿ 27, 2020
19 °C

ದಸರಾ ಸೈಕ್ಲಿಂಗ್‌: ವಿಜಯಪುರ ಸ್ಪರ್ಧಿಗಳ ಪ್ರಾಬಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ನಿರೀಕ್ಷೆಯಂತೆಯೇ ವಿಜಯಪುರದ ಸೈಕ್ಲಿಸ್ಟ್‌ಗಳು ದಸರಾ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರು.

ವರುಣಾ ಗ್ರಾಮದಲ್ಲಿ ಭಾನುವಾರ ನಡೆದ ‘ಟೀಮ್‌ ಟೈಮ್‌ ಟ್ರಯಲ್‌’ ಸ್ಪರ್ಧೆಯ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ವಿಜಯಪುರದ ತಂಡಗಳು ಅಗ್ರಸ್ಥಾನ ಪಡೆದುಕೊಂಡವು.

ಪುರುಷರ ವಿಭಾಗದಲ್ಲಿ ವಿಜಯಪುರ ತಂಡ 50 ಕಿ.ಮೀ ದೂರವನ್ನು 1 ಗಂಟೆ 14 ನಿಮಿಷ 37 ಸೆಕೆಂಡುಗಳಲ್ಲಿ ತಲುಪಿತು. ಮಹಿಳಾ ತಂಡದವರು 25 ಕಿ.ಮೀ ದೂರವನ್ನು 43 ನಿಮಿಷ 8 ಸೆಕೆಂಡುಗಳಲ್ಲಿ ಪೂರೈಸಿದರು.

ಫಲಿತಾಂಶ: ಪುರುಷರ ವಿಭಾಗ: ವಿಜಯಪುರ (ಯಲುಗುರೇಶ್ ಗಡ್ಡಿ, ಮುತ್ತಪ್ಪ ನವಲಹಳ್ಳಿ, ಅಭಿಷೇಕ್‌ ಮರಣೂರು, ಶಿವಲಿಂಗಪ್ಪ ಯಲಮೇಲಿ, ಕಾಲ: 1 ಗಂ. 14 ಮಿ. 37ಸೆ.)–1, ಬಾಗಲಕೋಟೆ (ಕಾರೆಪ್ಪ, ಶ್ರೀಶೈಲ, ಬಸವರಾಜ, ಮಹಾಂತೇಶ್, ಕಾಲ: 1 ಗಂ. 17 ನಿ. 22 ಸೆ.)–2, ಮೈಸೂರು (ಎಚ್‌.ಎಂ.ಮಧುಕುಮಾರ್, ಆರ್‌.ವಿನಯ್, ಕೆ.ವಿ.ವೈಶಾಖ್, ಎಚ್‌.ಆರ್‌.ಲಕ್ಷ್ಮೀಶ, ಕಾಲ: 1 ಗಂ. 19 ನಿ.7 ಸೆ.)–3

ಮಹಿಳೆಯರ ವಿಭಾಗ: ವಿಜಯಪುರ (ಅನಿತಾ ಶಿಂಧೆ, ಕಾವೇರಿ ಎಂ., ಸೌಮ್ಯಾ, ಸಾವಿತ್ರಿ, ಕಾಲ: 43 ನಿ. 8 ಸೆ.)–1, ಬಾಗಲಕೋಟೆ (ಸಾಯಿರಾಬಾನು ಲೋದಿ, ದಾನಮ್ಮ ಗುರವ್, ಭಾವನಾ ಪಾಟೀಲ, ಅನುಪಮಾ, ಕಾಲ: 46 ನಿ. 7 ಸೆ.)–2, ಗದಗ (ರೇಣುಕಾ, ನೇತ್ರಾ, ಅಂಜಲಿ, ಪವಿತ್ರಾ, ಕಾಲ: 47 ನಿ. 28 ಸೆ)–3

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು