ಶನಿವಾರ, ಸೆಪ್ಟೆಂಬರ್ 18, 2021
21 °C
ಇಂದಿನಿಂದ ಡೆಸರ್ಟ್‌ ಸ್ಟಾರ್ಮ್‌ ಮೋಟರ್‌ ರ‍್ಯಾಲಿ

ಪ್ರಶಸ್ತಿಯ ವಿಶ್ವಾಸದಲ್ಲಿ ಟಿವಿಎಸ್‌ ತಂಡದ ಚಾಲಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶೆರ್ಕೊ ಟಿವಿಎಸ್‌ ರೇಸಿಂಗ್‌ ತಂಡದ ಚಾಲಕರು ಬುಧವಾರದಿಂದ ರಾಜಸ್ಥಾನದ ಥಾರ್‌ ಮರುಭೂಮಿಯಲ್ಲಿ ನಡೆಯುವ ಡೆಸರ್ಟ್‌ ಸ್ಟಾರ್ಮ್‌ ಮೋಟರ್‌ ರ‍್ಯಾಲಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಟಿವಿಎಸ್‌ ತಂಡದ ಏಳು ಮಂದಿ ಚಾಲಕರು ಕಣದಲ್ಲಿದ್ದಾರೆ. ಕರ್ನಾಟಕದ ಆರ್‌.ನಟರಾಜ್‌, ಅಬ್ದುಲ್‌ ವಾಹೀದ್‌ ತನ್ವೀರ್‌, ಐಶ್ವರ್ಯ ಪಿಸ್ಸೆ, ಆರ್‌.ಇ. ರಾಜೇಂದ್ರ ಮತ್ತು ಫ್ರಾನ್ಸ್‌ನ ಆಡ್ರಿಯನ್‌ ಮೆಟ್ಗೆ ಅವರು 250 ಸಿಸಿ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಇಮ್ರಾನ್‌ ಪಾಷಾ ಮತ್ತು ಸಚಿನ್‌ ಅವರು 250 ಸಿಸಿ ಒಳಗಿನವರ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಒಟ್ಟು 600 ಕಿಲೊ ಮೀಟರ್ಸ್‌ ದೂರದ ಈ ರ‍್ಯಾಲಿಯು ಹಲವು ಹಂತಗಳಲ್ಲಿ ನಡೆಯಲಿದ್ದು ಮೇ 11ಕ್ಕೆ ಕೊನೆಗೊಳ್ಳಲಿದೆ. ರ‍್ಯಾಲಿಯಲ್ಲಿ ಒಟ್ಟು 100 ತಂಡಗಳು ಭಾಗವಹಿಸಲಿವೆ. ಮೊದಲ ಹಂತದ ಸ್ಪರ್ಧೆಗೆ (158 ಕಿ.ಮೀ) ಬಿಕಾನೇರ್‌ನಲ್ಲಿ ಚಾಲನೆ ಸಿಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.