ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಗ್ರೀನ್ಸ್, ಹೊಯ್ಸಳ, ಡಿಆರ್‌ಡಿಒ ಎಂಟರ ಘಟ್ಟಕ್ಕೆ

Last Updated 18 ಸೆಪ್ಟೆಂಬರ್ 2021, 16:38 IST
ಅಕ್ಷರ ಗಾತ್ರ

ಬೆಂಗಳೂರು: ರೋಚಕ ಹೋರಾಟದ ಕೊನೆಯಲ್ಲಿ ನಿಟ್ಟೆಯ ಕೆ.ಎಸ್‌.ಹೆಗ್ಡೆ ಸಂಸ್ಥೆಯ ತಂಡ ಸೋಲೊಪ್ಪಿಕೊಂಡಿತು. 88–86ರಲ್ಲಿ ಜಯ ಗಳಿಸಿದ ದಾವಣಗೆರೆಯ ಗ್ರೀನ್ಸ್ ತಂಡ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಎಸ್‌.ರಂಗರಾಜನ್ ಸ್ಮಾರಕ ‘ಸಿ’ ಡಿವಿಷನ್ ಲೀಗ್‌ನ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲಾರ್ಧದಲ್ಲಿ 45–47ರ ಹಿನ್ನಡೆಯಲ್ಲಿದ್ದ ಗ್ರೀನ್ಸ್ ನಂತರ ಚೇತರಿಕೆಯ ಆಟವಾಡಿತು. ಅಬೆಲ್‌ ಮತ್ತು ಆಯುಷ್ ಕ್ರಮವಾಗಿ 27 ಮತ್ತು 12 ಪಾಯಿಂಟ್ ಗಳಿಸಿದರು. ಪೊನ್ಸಿಬಿನ್ (36) ಮತ್ತು ಮೋಹಿತ್ (14) ಅವರ ಅಮೋಘ ಆಟ ನಿಟ್ಟೆ ಸಂಸ್ಥೆಯ ಕೈ ಹಿಡಿಯಲಿಲ್ಲ.

ಮತ್ತೊಂದು ಪಂದ್ಯದಲ್ಲಿ ಹಾಸನದ ಹೊಯ್ಸಳ ಬ್ಯಾಸ್ಕೆಟ್‌ಬಾಲ್ ಕ್ಲಬ್‌ 63–41ರಲ್ಲಿ ಸಿಜೆಸಿ ವಿರುದ್ಧ ಜಯ ಗಳಿಸಿತು. ಮೊದಲಾರ್ಧದಲ್ಲೇ ಮುನ್ನಡೆ ಗಳಿಸಿದ್ದ ಹೊಯ್ಸಳ ತಂಡ ಅದೇ ಲಯವನ್ನು ದ್ವಿತೀಯಾರ್ಧದಲ್ಲೂ ಉಳಿಸಿಕೊಂಡಿತು. ಪ್ರಭುರಾಜ್ 23 ಮತ್ತು ವಿನೀತ್ 13 ಪಾಯಿಂಟ್ ಗಳಿಸಿದರೆ ಸಿಜೆಸಿ ಪರ ವಿನೋದ್ 14 ಹಾಗೂ ಅನಿರುದ್ಧ 10 ಪಾಯಿಂಟ್ ಕಲೆ ಹಾಕಿದರು.

ಆದಿತ್ಯ (16) ಮತ್ತು ರಾಹುಲ್ (15) ಅವರ ಉತ್ತಮ ಆಟದ ಬಲದಿಂದ ವಿಮಾನಪುತ್ರ ಸ್ಪೋರ್ಟ್ಸ್ ಕ್ಲಬ್ ಕನಕಪುರದ ಎನ್‌ಡಬ್ಲ್ಯುಒಎಲ್‌ ವಿರುದ್ಧ 70–45ರ ಜಯ ಗಳಿಸಿತು. ಕನಕಪುರ ತಂಡಕ್ಕಾಗಿ ನಿತಿನ್ 19 ಮತ್ತು ಪುನೀತ್‌ 14 ಪಾಯಿಂಟ್ ಗಳಿಸಿಕೊಟ್ಟರು. ಭಾರತ್‌ ಎಸ್‌ಯು 79–62ರಲ್ಲಿ ರಾಜ್‌ಕುಮಾರ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ತಂಡವನ್ನು ಮಣಿಸಿತು. ವಿಜಯಿ ತಂಡಕ್ಕಾಗಿ ಶುಭಂ ಸಿಂಗ್ 21 ಮತ್ತು ನಕುಲ್ 13 ಪಾಯಿಂಟ್ ತಂದುಕೊಟ್ಟರು. ರಾಜ್‌ಕುಮಾರ್ ತಂಡದ ಸುಮಂತ್‌ 14 ಪಾಯಿಂಟ್ ಗಳಿಸಿದರು.

ಬಿ.ಸಿ ಬ್ಯಾಸ್ಕೆಟ್‌ಬಾಲ್ ಕ್ಲಬ್ 107–104ರಲ್ಲಿ ವೈಎಂಎಂಎ ವಿರುದ್ಧ ಜಯ ಗಳಿಸಿತು. ಬಿ.ಸಿ ಕ್ಲಬ್ ಪರ ಅಕ್ಷಣ್‌ 29 ಮತ್ತು ವ್ಯಾಸ 25, ವೈಎಂಎಂಎ ಪರ ಅಭಿನವ್ 34 ಮತ್ತು ಪ್ರಶಾಂತ್ ತೋಮರ್ 30 ಪಾಯಿಂಟ್ ಗಳಿಸಿದರು. ವಿವೇಕ್‌ ಸ್ಪೋರ್ಟ್ಸ್ ಕ್ಲಬ್‌ 77–45ರಲ್ಲಿ ಹಲಸೂರು ಎಸ್‌ಯು ತಂಡವನ್ನು ಸೋಲಿಸಿತು. ಡಿಆರ್‌ಡಿಒ 67–29ರಲ್ಲಿ ಪಿಪಿಸಿಯನ್ನು ಸೋಲಿಸಿತು.

ಕ್ವಾರ್ಟರ್ ಫೈನಲ್ ಪಂದ್ಯಗಳು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿವೆ. ದೇವಾಂಗ ಮತ್ತು ಗ್ರೀನ್ಸ್‌ ನಡುವೆ ಮೊದಲ ಪಂದ್ಯ ನಡೆಯಲಿದ್ದು ವಿಮಾನಪುತ್ರವನ್ನು ಬಿ.ಸಿ, ಭಾರತ್‌ ತಂಡವನ್ನು ಹೊಯ್ಸಳ, ಡಿಆರ್‌ಡಿಒವನ್ನು ವಿವೇಕ್ ಎಸ್‌ಸಿ ಎದುರಿಲಿಸಲಿದೆ. ಸೆಮಿಫೈನಲ್ ಪಂದ್ಯಗಳು ಸಂಜೆ 4ರಿಂದ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT