ಬೆಂಗಳೂರು: ಅಮೋಘ ಆಟವಾಡಿದ ಕರ್ನಾಟಕದ ದಕ್ಷಿಶ್ ಆರ್ಯನ್ ಹಾಗೂ ತಮಿಳುನಾಡಿನ ಶ್ರಾವ್ಯಾ ನುಂಬುರಿ ಕೆಎಸ್ಎಲ್ಟಿಎ–ಎಐಟಿಎ 12 ವರ್ಷದೊಳಗಿನವರ ವಿಭಾಗದ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಜಯಿಸಿದರು.

ಶುಕ್ರವಾರ ಇಲ್ಲಿ ನಡೆದ ಬಾಲಕರ ಫೈನಲ್ ಪಂದ್ಯದಲ್ಲಿ ದಕ್ಷಿಶ್ 6-1, 6-0ರಿಂದ ರಾಜದ್ಯವರೇ ಆದ ಯಶಸ್ರಾಜ್ ಎದುರು ಗೆದ್ದರು. ಟೂರ್ನಿಯಲ್ಲಿ ಕ್ವಾಲಿಫೈಯರ್ ಆಟಗಾರನಾಗಿ ಕಣಕ್ಕಿಳಿದಿದ್ದ ದಕ್ಷಿಶ್, ಶ್ರೇಯಾಂಕ ಹೊಂದಿದ್ದ ಮೂವರು ಆಟಗಾರರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಶ್ರಾವ್ಯಾ 6-0, 6-3ರಿಂದ ಕರ್ನಾಟಕದ ಸೃಷ್ಟಿ ಕಿರಣ್ ಅವರನ್ನು ಮಣಿಸಿದರು.

ಜೇಸನ್–ಗಗನಾಗೆ 18 ವರ್ಷದೊಳಗಿನವರ ವಿಭಾಗದ ಕಿರೀಟ: ಎಐಟಿಎ 18 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಜೇಸನ್ ಮೈಕೆಲ್ ಡೇವಿಡ್ ಹಾಗೂ ಗಗನಾ ಮೋಹನ್ ಕುಮಾರ್ ಪ್ರಶಸ್ತಿಗೆ ಮುತ್ತಿಕ್ಕಿದರು.

ಬಾಲಕರ ವಿಭಾಗದ ಜಿದ್ದಾಜಿದ್ದಿನ ಫೈನಲ್ನಲ್ಲಿ ಅಗ್ರಶ್ರೇಯಾಂಕದ ಜೇಸನ್, ಮೊದಲ ಸೆಟ್ ಸೋತರೂ ಎದೆಗುಂದೆ 1-6, 6-1, 6-2ರಿಂದ ರಿಷಿ ವಂದನ್ ಅವರನ್ನು ಮಣಿಸಿದರು. ರಿಷಿ ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದರು.

ಬಾಲಕಿಯರ ಫೈನಲ್ ಪಂದ್ಯದಲ್ಲಿ ಗಗನಾ ಮೋಹನ್ ಕುಮಾರ್ 6-3, 6-3ರಿಂದ ಮಹಾರಾಷ್ಟ್ರದ ಡ್ಯಾನಿಕಾ ಫರ್ನಾಂಡಸ್ ಎದುರು ಗೆದ್ದು ಬೀಗಿದರು.

ಬಾಲಕರ ಡಬಲ್ಸ್ನಲ್ಲಿ ಸುಚಿರ್ ಶೇಷಾದ್ರಿ ಹಾಗೂಸಾರ್ಥ್ 4-6, 6-3, 10-4ರಿಂದ ಜೇಸನ್ ಹಾಗೂ ರಿಷಿ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಬಾಲಕಿಯರ ಡಬಲ್ಸ್ನಲ್ಲಿ ಜೆನಿಫರ್ ಚಾಕೊ– ಚಾರ್ಮಿ ಗೋಪಿನಾಥ್ 6-3, 7-5ರಿಂದ ಡ್ಯಾನಿಕಾ ಫರ್ನಾಂಡಸ್– ಸುರಭಿ ಶ್ರೀನಿವಾಸ್ ಎದುರು ಜಯಿಸಿ ಕಿರೀಟ ಧರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.