ಶನಿವಾರ, ಮೇ 21, 2022
23 °C

ವಿಶ್ವ ಡಬಲ್ಸ್ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಫೈನಲ್‌ಗೆ ದೀಪಿಕಾ ಪಳ್ಳಿಕಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದ ದೀಪಿಕಾ ಪಳ್ಳಿಕಲ್ ಕಾರ್ತಿಕ್ ಅವರು ಡಬ್ಲ್ಯುಎಸ್‌ಎಫ್‌ ವಿಶ್ವ ಸ್ಕ್ವಾಷ್‌ ಡಬಲ್ಸ್ ಚಾಂಪಿಯನ್‌ಷಿಪ್‌ನ ಎರಡು ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ.

ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮಹಿಳಾ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಅವರು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.

ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಶುಕ್ರವಾರ ದೀಪಿಕಾ ಹಾಗೂ ಸೌರವ್ ಘೋಷಾಲ್‌ 11–9, 11–5ರಿಂದ ವೇಲ್ಸ್‌ನ ಜೋಯಲ್ ಮಾಕಿನ್ ಮತ್ತು ತೇಸ್ನಿ ಇವಾನ್ಸ್ ಅವರನ್ನು ಮಣಿಸಿದರು.

ಮಹಿಳಾ ಡಬಲ್ಸ್‌ನ ನಾಲ್ಕರಘಟ್ಟದ ಪಂದ್ಯದಲ್ಲಿ ಜೋಷ್ನಾ ಚಿಣ್ಣಪ್ಪ ಮತ್ತು ದೀಪಿಕಾ ವಿರುದ್ಧ ಕಣಕ್ಕಿಳಿಯಬೇಕಿದ್ದ ನ್ಯೂಜಿಲೆಂಡ್‌ನ ಜೋಯಲ್‌ ಕಿಂಗ್– ಅಮಂಡಾ ಲ್ಯಾಂಡರ್ಸ್ ಮುರ್ಫಿ ಗಾಯದ ಹಿನ್ನೆಲೆಯಲ್ಲಿ ಹಿಂದೆ ಸರಿದರು. ಹೀಗಾಗಿ ಭಾರತದ ಜೋಡಿ ಫೈನಲ್‌ಗೆ ಅವಕಾಶ ಪಡೆಯಿತು.

ಮೂರು ವರ್ಷಗಳ ಬಳಿಕ ಸ್ಪರ್ಧೆಗಿಳಿದಿರುವ ದೀಪಿಕಾ ಹಾಗೂ ಜೋಷ್ನಾ ಅವರು ಫೈನಲ್‌ನಲ್ಲಿ, ಇಂಗ್ಲೆಂಡ್‌ನ ಸಾರಾ ಜೇನ್ ಪೆರಿ– ಅಲಿಸನ್ ವಾಟರ್ಸ್ ಮತ್ತು ಮಲೇಷ್ಯಾದ ರಿಚಲ್ ಅರ್ನಾಲ್ಡ್ – ಶಿವಸಾಂಗರಿ ಸುಬ್ರಮಣ್ಯಂ ಅವರ ನಡುವಿನ ಪಂದ್ಯದ ವಿಜೇತರನ್ನು ಎದುರಿಸುವರು.

ದೀಪಿಕಾ ಹಾಗೂ ಸೌರವ್‌ ಅವರು ಪ್ರಶಸ್ತಿ ಸುತ್ತಿನಲ್ಲಿ ಅಲಿಸನ್‌ ವಾಟರ್ಸ್– ಆ್ಯಡ್ರಿಯನ್ ವಾಲರ್‌ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.