ನವದೆಹಲಿ: ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿರುವ ದಿವ್ಯಾಂಶ್ ಸಿಂಗ್ ಪನ್ವರ್ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್ನಲ್ಲಿ ವಿಶ್ವದಾಖಲೆಯ ಸ್ಕೋರ್ ಗಳಿಸಿದರು. ಪುರುಷರ 10 ಮೀಟರ್ ಏರ್ ರೈಫಲ್ ಟಿ4 ವಿಭಾಗದಲ್ಲಿ ಅವರು 253.1 ಪಾಯಿಂಟ್ಸ್ ಕಲೆಹಾಕಿ ಈ ಸಾಧನೆ ಮಾಡಿದರು.

ಅರ್ಹತಾ ಸುತ್ತನ್ನು 629.7 ಪಾಯಿಂಟ್ಸ್ಗಳೊಂದಿಗೆ ಮೂರನೆಯವರಾಗಿ ಕೊನೆಗೊಳಿಸಿದ ದಿವ್ಯಾಂಶ್, ಫೈನಲ್ನಲ್ಲಿ ಒಲಿಂಪಿಕ್ ಕೋಟಾ ವಿಜೇತ ಇನ್ನೋರ್ವ ಶೂಟರ್ ಐಶ್ವರಿಪ್ರತಾಪ್ ಸಿಂಗ್ ಥೋಮರ್ ಅವರನ್ನು ಹಿಂದಿಕ್ಕಿದರು. ಪ್ರತಾಪ್ ಸಿಂಗ್ ಅವರು ಫೈನಲ್ನಲ್ಲಿ 252.8 ಪಾಯಿಂಟ್ಸ್ ಗಳಿಸಿದರು.

ದಿವ್ಯಾಂಶ್ ಅಲ್ಲದೆ, ಸೌರಭ್ ಚೌಧರಿ (ಪುರುಷರ 10 ಮೀ. ಏರ್ ಪಿಸ್ತೂಲ್ ಟಿ4 ವಿಭಾಗ), ಚಿಂಕಿ ಯಾದವ್ (ಮಹಿಳೆಯರ 25 ಮೀ. ಪಿಸ್ತೂಲ್ ಟಿ4 ವಿಭಾಗ) ಹಾಗೂ ತೇಜಸ್ವಿನಿ ಸಾವಂತ್ (ಮಹಿಳೆಯರ 50 ಮೀ. ರೈಫಲ್ 3 ಪೋಸಿಷನ್ಸ್ ಟಿ4) ತಮ್ಮ ವಿಭಾಗಗಳಲ್ಲಿ ಅಗ್ರ ಸ್ಥಾನ ಗಳಿಸಿದರು.

ಸೌರಭ್ ತಮ್ಮ ವಿಭಾಗದಲ್ಲಿ 243.1 ಪಾಯಿಂಟ್ಸ್ ಕಲೆಹಾಕಿದರು. ಹರಿಯಾಣದ ಸರಬ್ಜೋತ್ ಸಿಂಗ್ ಹಾಗೂ ಭಾರತೀಯ ಸೇನೆಯ ರವೀಂದ್ರ ಸಿಂಗ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.