ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಈಜು: ಡ್ರೆಸೆಲ್‌ ಮತ್ತೊಂದು ವಿಶ್ದದಾಖಲೆ

ಅಮೆರಿಕದ ಈಜುಗಾರನಿಗೆ ಮೂರನೇ ಚಿನ್ನ
Last Updated 26 ಜುಲೈ 2019, 19:50 IST
ಅಕ್ಷರ ಗಾತ್ರ

ಗುಂವಾಗ್ಜು, ದಕ್ಷಿಣ ಕೊರಿಯಾ: ಅಮೆರಿಕದ ಸ್ಟಾರ್‌ ಈಜುಗಾರ ಕೇಲೆಬ್‌ ಡ್ರೆಸೆಲ್‌ ಶುಕ್ರವಾರ 100 ಮೀಟರ್ಸ್‌ ಬಟರ್‌ಫ್ಲೈ ಈಜು ಸ್ಪರ್ಧೆಯನ್ನು ವಿಶ್ವ ದಾಖಲೆ ಅವಧಿಯಲ್ಲಿ ಪೂರೈಸಿ, ಮೈಕೆಲ್‌ ಫೆಲ್ಪ್ಸ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುಳುಗಿಸಿದರು. ಅಮೆರಿಕದವರೇ ಆದ ಸಿಮೊನೆ ಮಾನ್ಯುವೆಲ್‌ ಮಹಿಳೆಯರ 100 ಮೀ. ಫ್ರೀಸ್ಟೈಲ್‌ ಸ್ಪರ್ಧೆ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಂಡರು.

ಹಾಲಿ ಚಾಂಪಿಯನ್‌ ಕೂಡ ಆಗಿದ್ದ ಡ್ರೆಸೆಲ್‌ ಬರೇ 49.50 ಸೆಕೆಂಡುಗಳಲ್ಲಿ ದೂರ ಕ್ರಮಿಸಿ ಅಮೆರಿಕದ ಅಭಿಮಾನಿಗಳತ್ತ ಬಿಗಿಹಿಡಿದ ಮುಷ್ಠಿಯನ್ನು ತೋರಿ ಗೆಲುವನ್ನು ಸಂಭ್ರಮಿಸಿದರು. ಇದು ಫೆಲ್ಪ್ಸ್‌2009ರಲ್ಲಿ ಸ್ಥಾಪಿಸಿದ್ದ ದಾಖಲೆಗಿಂತ 0.32 ಸೆ.ಗಳಿಗಿಂತ ಕಡಿಮೆ ಅವಧಿ. 22 ವರ್ಷದ ಡ್ರೆಸೆಲ್‌ಗೆ ಇದು ಈ ಕೂಟದ ಮೂರನೇ ಚಿನ್ನ. 2017ರ ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಏಳು ಚಿನ್ನ ಗೆದ್ದ ಸಾಧನೆ ಸರಿಗಟ್ಟುವ ಹಾದಿಯಲ್ಲಿದ್ದಾರೆ.

ಅಮೆರಿಕದ ಹದಿಹರೆಯದ ಈಜುಗಾರ್ತಿ ಸ್ಮಿತ್‌ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ವಿಶ್ವ ದಾಖಲೆ ಸ್ಥಾಪಿಸಿದರು. ರಷ್ಯದ ಆ್ಯಂಟನ್‌ ಚುಪ್ಕೋವ್‌ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲೂ ನೂತನ ವಿಶ್ವ ದಾಖಲೆ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT