ಮಂಗಳವಾರ, ಜುಲೈ 27, 2021
23 °C

ಜುಲೈ 5ರಿಂದ ಫಾರ್ಮುಲಾ ಒನ್‌ ಪುನರಾರಂಭ

ಎಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ಜುಲೈನಲ್ಲಿ ನಿಗದಿಯಾಗಿರುವ ಆಸ್ಟ್ರಿಯನ್‌ ಗ್ರ್ಯಾನ್‌ ಪ್ರಿ ಎರಡು ರೇಸ್‌ಗಳೊಂದಿಗೆ ಫಾರ್ಮುಲಾ ಒನ್‌ ಪುನರಾರಂಭಗೊಳ್ಳಲಿದೆ. ಇವೆರಡೂ ಯೂರೋಪ್‌ನಲ್ಲಿ ನಡೆಯುವ ಎಂಟು ರೇಸ್‌ಗಳ ಭಾಗವಾಗಿವೆ. 

‘ಸ್ಪೈಲ್‌ಬರ್ಗ್‌ನ ರೆಡ್‌ಬುಲ್‌ ರಿಂಗ್‌ ಆಯೋಜಿಸುತ್ತಿರುವ ಆಸ್ಟ್ರಿಯನ್ ರೇಸ್‌ಗಳು ಜುಲೈ 5 ಹಾಗೂ 12ರಂದು ನಡೆಯಲಿವೆ’ ಎಂದು ಎಫ್‌ಐಎ ಮಂಗಳವಾರ ತಿಳಿಸಿದೆ.

ಜುಲೈ 19ರಂದು ಹಂಗರಿ, ಆಗಸ್ಟ್‌ 2 ಹಾಗೂ 9ರಂದು ಸಿಲ್ವರ್‌ಸ್ಟೋನ್‌ನಲ್ಲಿ ಬ್ರಿಟಿಷ್‌ ಗ್ರ್ಯಾನ್‌ಪ್ರಿ ರೇಸ್‌ಗಳು ನಡೆಯಲಿವೆ. ಆಗಸ್ಟ್‌ 16ರಂದು ಸ್ಪೇನ್‌ , 30ರಂದು ಬೆಲ್ಜಿಯಂ ಹಾಗೂ ಸೆಪ್ಟೆಂಬರ್‌ 6ರಂದು ಇಟಲಿಯಲ್ಲಿ ರೇಸ್‌ಗಳು ನಿಗದಿಯಾಗಿವೆ.

‘ಎರಡು ತಿಂಗಳಿಗೂ ಹೆಚ್ಚು ಕಾಲ ನಮ್ಮ ಎಲ್ಲ ಭಾಗೀದಾರರು, ಅಧಿಕಾರಿಗಳು ಮತ್ತು 10 ತಂಡಗಳೊಂದಿಗೆ ಚರ್ಚೆ ನಡೆಸಿದ ಬಳಿಕ ವೇಳಾಪಟ್ಟಿಯನ್ನು ರೂಪಿಸಿದ್ದೇವೆ. ಎಲ್ಲರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಅವಕಾಶವಿಲ್ಲ’ ಎಂದು ಎಫ್‌ಐಎ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು