ಬೆಲ್‌ಗ್ರೇಡ್: ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ನ (ಫಿಬಾ) ಮಾಜಿ ಪ್ರಧಾನ ಕಾರ್ಯದರ್ಶಿಬಾರಿಸ್ಲಾವ್ ಸ್ಟ್ಯಾಂಕೊವಿಚ್ (94) ಶುಕ್ರವಾರ ನಿಧನರಾದರು.ಬ್ಯಾಸ್ಕೆಟ್‌ಬಾಲ್ ಪಂದ್ಯಗಳಲ್ಲಿ ನಾಲ್ಕು ಕ್ವಾರ್ಟರ್‌ಗಳ ವ್ಯವಸ್ಥೆ ಮತ್ತು ಮೂರು ಪಾಯಿಂಟ್‌ಗಳ ಶಾಟ್ ಜಾರಿಗೆ ತಂದ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿರುವ ಬಾರಿಸ್ಲಾವ್ದೀರ್ಘ ಅವಧಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.ಎನ್‌ಬಿಎ ಆಟಗಾರರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆಯುವಂತೆ ಮಾಡುವಲ್ಲಿ ಪ್ರುಮುಖ ಪಾತ್ರ ವಹಿಸಿದ್ದರು.

ಬೋಸ್ನಿಯಾದಲ್ಲಿ ಜನಿಸಿದ್ದ ಬಾರಿಸ್ಲಾವ್ ಅವರು ರೆಡ್ ಸ್ಟಾರ್ ಬೆಲ್‌ಗ್ರೇಡ್ ತಂಡದ ಪರವಾಗಿ ಆಡಿ ಗಮನ ಸೆಳೆದಿದ್ದರು. 1950ರಲ್ಲಿ ಅರ್ಜೆಂಟೀನಾದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಯುಗೊಸ್ಲಾವಿಯಾ ತಂಡದಲ್ಲಿ ಆಡಿದ್ದರು. ನಿವೃತ್ತರಾದ ನಂತರ ಯುಗೊಸ್ಲಾವ್ ಬ್ಯಾಸ್ಕೆಟ್‌ಬಾಲ್ ಸಂಸ್ಥೆಗೆ ಒಂದು ದಶಕದ ಕಾಲ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಆ ದೇಶ ಬ್ಯಾಸ್ಕೆಟ್‌ಬಾಲ್ ಕ್ರೀಡೆಯ ಶಕ್ತಿಕೇಂದ್ರವಾಗಿತ್ತು. 1976ರಿಂದ 2002ರ ವರೆಗೆ ಫಿಬಾದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರ ಪ್ರಯತ್ನದ ಫಲವಾಗಿ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಎನ್‌ಬಿಎ ಆಟಗಾರರು ಆಡುವಂತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.