ಭಾನುವಾರ, ಆಗಸ್ಟ್ 18, 2019
23 °C

ಕೋಟಿಫ್‌ ಕಪ್‌ ಟೂರ್ನಿ: ಭಾರತ ಆಟಕ್ಕೆ ಮೆಚ್ಚುಗೆ

Published:
Updated:

ನವದೆಹಲಿ: ಸ್ಪೇನ್‌ನ ವೆಲೆನ್ಸಿಯಾದಲ್ಲಿ ಇತ್ತೀಚೆಗೆ ನಡೆದಿದ್ದ ‘ಕೋಟಿಫ್‌ ಕಪ್‌’ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಉತ್ತಮ ಪ್ರದರ್ಶನ ಮೆಚ್ಚುಗೆ ಪಡೆದಿದೆ.

ಈ ಸಾಧನೆಯಿಂದ ಖುಷಿಗೊಂಡ ಟೂರ್ನಿಯ ಅಧ್ಯಕ್ಷರು, ಸಮಾರೋಪ ಸಮಾರಂಭದಲ್ಲಿ ಮೂರನೇ ಸ್ಥಾನ ಪಡೆದ ಭಾರತ ತಂಡಕ್ಕೆ ವಿಶೇಷ ಟ್ರೋಫಿಯೊಂದನ್ನು ನೀಡಿದರು.

ಭಾರತದ ವನಿತೆಯರು ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿದ್ದು, ಎರಡರಲ್ಲಿ (ಮೌರಿಟಾನಿಯಾ ವಿರುದ್ಧ 3–1 ಗೆಲುವು, ಬೊಲಿವಿಯಾ ವಿರುದ್ಧ 7–0 ಗೆಲುವು) ಜಯಗಳಿಸಿತ್ತು. ಎರಡು ಪಂದ್ಯಗಳಲ್ಲಿ (0–2 ರಿಂದ ವಿಲ್ಲಾರಿಯಲ್‌ ವಿರುದ್ಧ, ಇದೇ ಅಂತರದಿಂದ ಸ್ಪೇನ್‌ ವಿರುದ್ಧ) ಸೋತಿತ್ತು. ಭಾರತ ಈ ಸಾಧನೆಯಿಂದ 3ನೇ ಸ್ಥಾನ ಪಡೆದಿತ್ತು.

‘ಇದು ಭಾರತದ ಇದುವರೆಗಿನ ಉತ್ತಮ ಸಾಧನೆ. ಶಿಸ್ತುಬದ್ಧ ಆಟವಾಡಿದ ತಂಡವೆಂಬ ಗೌರವವೂ ಭಾರತ ನಾರಿಯರದ್ದಾಗಿತ್ತು’ ಎಂದು ತಂಡದ ಮುಖ್ಯ ಕೋಚ್‌ ಮೆಮೋಲ್‌ ರಾಕಿ ತಿಳಿಸಿದರು.

Post Comments (+)