ಶುಕ್ರವಾರ, ಜೂಲೈ 3, 2020
21 °C

ಫೋಬ್ಸ್‌ ಪಟ್ಟಿಯಲ್ಲಿ ಸಿಂಧು, ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೋಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ, ಈ ವರ್ಷ ಹೆಚ್ಚು ಆದಾಯ ಗಳಿಸಿದ 100 ಸಿಲೆಬ್ರಿಟಿ ಮಹಿಳೆಯರ ಪಟ್ಟಿಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಸ್ಥಾನ ಗಳಿಸಿದ್ದಾರೆ.

ಸಿಂಧು ಅವರು ಪಟ್ಟಿಯಲ್ಲಿ 20ನೇ ಸ್ಥಾನ ಗಳಿಸಿದ್ದು ಸೈನಾ 58ನೇ ಸ್ಥಾನದಲ್ಲಿದ್ದಾರೆ. ಸಿಂಧು ಅವರ ಈ ಬಾರಿಯ ಗಳಿಕೆ ₹ 36.50 ಕೋಟಿ. ಕಳೆದ ಬಾರಿ ಇದಕ್ಕಿಂತಲೂ ಹೆಚ್ಚು, ₹ 57.25 ಕೋಟಿ ಆದಾಯ ಗಳಿಸಿದ್ದರು.

ಸೈನಾ ಅವರ ಕಳೆದ ಬಾರಿಯ ಆದಾಯ ₹ 31 ಕೋಟಿ ಆಗಿತ್ತು. ಈ ಬಾರಿ ₹ 16.54 ಆಗಿದೆ ಎಂದು ವೆಬ್‌ಸೈಟ್‌ಗಳು ವರದಿ ಮಾಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು